For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಮಿಂಚಲಿದೆ '3 ಗಂಟೆ 30 ದಿನ 30 ಸೆಕೆಂಡ್'

  By Bharath Kumar
  |

  ಟೈಟಲ್ ನಿಂದ ಹೆಚ್ಚು ಸದ್ದು ಮಾಡುತ್ತಿರುವ '3 ಗಂಟೆ 30 ದಿನ 30 ಸೆಕೆಂಡ್' ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಮುಂದಿನ ದಿನದಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚಿಸುವ ಯೋಚನೆ ಮಾಡಿದೆ ಚಿತ್ರತಂಡ.

  ಈಗಾಗಲೇ ಕನ್ನಡ ಪ್ರೇಕ್ಷಕರು ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ಆತ್ಮವಿಶ್ವಾಸದಲ್ಲಿರುವ ಹೊರನಾಡ ಕನ್ನಡಿಗರಿಗೆ ಕೂಡ ಚಿತ್ರವನ್ನ ತೋರಿಸುವ ಉದ್ದೇಶದಿಂದ ವಿದೇಶಗಳಲ್ಲೂ ಸಿನಿಮಾ ಪ್ರದರ್ಶನ ಮಾಡಲು ನಿರ್ಧರಿಸಿದೆ.

  '3 ಗಂಟೆ 30 ದಿನ 30 ಸೆಕೆಂಡ್' ಚಿತ್ರ ನೋಡಲು 5 ಕಾರಣ

  ಜನವರಿ 19 ರಂದು ರಿಲೀಸ್ ಆಗುತ್ತಿರುವ '3 ಗಂಟೆ 30 ದಿನ 30 ಸೆಕೆಂಡ್' ಚಿತ್ರವನ್ನ ಯುಎಸ್ ನಲ್ಲಿ ಬಿಡುಗಡೆ ಮಾಲಾಗುತ್ತಿದೆ. ಅದಾದ ನಂತರ ಆಸ್ಟ್ರೆಲಿಯಾ, ಯೂರೋಪ್ ಹಾಗೂ ಲಂಡನ್, ದೇಶಗಳಲ್ಲಿ ರಿಲೀಸ್ ಮಾಡಲು ವಿತರಕರು ಯೋಜನೆ ಹಾಕಿದ್ದಾರೆ.

  ಎರಡನೇ ಶೆಡ್ಯೂಲ್ ನಲ್ಲಿ ನ್ಯೂಜಿಲ್ಯಾಂಡ್, ಸಿಂಗಾಪೂರ್ ರಾಷ್ಟ್ರಗಳಲ್ಲಿ ಪ್ರದರ್ಶನ ಮಾಡುತ್ತಿದ್ದು, ಅಲ್ಲಿನ ಕನ್ನಡಿಗರಿಗೆ ಕನ್ನಡ ಸಿನಿಮಾವನ್ನ ನೋಡುವ ಅವಕಾಶ ಸಿಗಲಿದೆ. ವಿದೇಶಗಳಲ್ಲಿ 'ಜೋ' ಎಂಬುವರು ಸಿನಿಮಾವನ್ನ ವಿತರಣೆ ಮಾಡುತ್ತಿದ್ದಾರೆ.

  ಕೇಳುಗರ ಮನ ಗೆದ್ದ '3 ಗಂಟೆ 30 ದಿನ 30 ಸೆಕೆಂಡ್' ಹಾಡುಗಳು

  ಇನ್ನುಳಿದಂತೆ ಹಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಧುಸೂದನ್‌ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ನಟ ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಚಿತ್ರದ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್, ಸುಧಾರಾಣಿ, ಸುಂದರ್, ಯಮುನಾ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದ್ದು, ಒಟ್ಟು 6 ಹಾಡುಗಳಿವೆ.

  English summary
  kannada actor arun gowda and actress kavya shetty starrer '3 gante 30 dina 30 second' movie will releasing on january 19th all over world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X