For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷದ 3ನೇ ಶುಕ್ರವಾರ 3 ಚಿತ್ರಗಳು ಬಿಡುಗಡೆ

  |

  ಹೊಸ ವರ್ಷ ಪ್ರಾರಂಭ ಆಗಿ ಮೂರುನೇ ಶುಕ್ರವಾರ ಬರುತ್ತಿದೆ. ಕಳೆದ ಎರಡು ಶುಕ್ರವಾರ ಬಿಡುಗಡೆಯಾದ ಸಿನಿಮಾಗಳ ಪೈಕಿ 'ಲಂಬೋದರ' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆಡುಕೊಂಡಿದೆ. ಇನ್ನು ಈ ವಾರ ಮೂರು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

  'ಟೋಪಿವಾಲ' ಹಾಗೂ 'ಶ್ರೀನಿವಾಸ ಕಲ್ಯಾಣ' ಸಿನಿಮಾಗಳನ್ನ ಮಾಡಿದ್ದ ನಿರ್ದೇಶಕ ಶ್ರೀನಿ ಮತ್ತೆ ಬಂದಿದ್ದಾರೆ. ಅವರ ನಿರ್ದೇಶನ ಹಾಗೂ ನಟನೆಯ 'ಬೀರ್ ಬಲ್' ನಾಳೆ ರಿಲೀಸ್ ಆಗುತ್ತಿದೆ. ಉಳಿದಂತೆ, ರಂಗಭೂಮಿ ಗೆಳೆಯರ 'ಗಿಣಿ ಹೇಳಿದ ಕಥೆ' ಹಾಗೂ ಹೊಸಬರ 'ಲಾಕ್' ಸಿನಿಮಾ ನಾಳೆ ಬಿಡುಗಡೆಯಾಗುತ್ತಿವೆ.

  ಅಂಬರೀಶ್ ಪುತ್ರ 'ಅಮರ್' ಎಂಟ್ರಿ ಯಾವಾಗ?

  ಈ ಮೂರು ಚಿತ್ರತಂಡಗಳು ತಮ್ಮ ತಮ್ಮ ಪ್ರಯತ್ನಗಳನ್ನು ಮಾಡಿದ್ದು, ನಾಳೆ ಅದರ ಪಲಿತಾಂಶ ದೊರೆಯಲಿದೆ. ಅಂದಹಾಗೆ, ನಾಳೆ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳ ಒಂದಷ್ಟು ವಿವರಗಳು ಮುಂದಿವೆ ಓದಿ..

  ಬೀರ್ ಬಲ್

  ಬೀರ್ ಬಲ್

  'ಬೀರ್ ಬಲ್' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟು ಹಾಕಿದೆ. ಶ್ರೀನಿ ಇದೀಗ 'ಬೀರ್ ಬಲ್' ಕಥೆ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅವರೇ ಹೀರೋ ಆಗಿದ್ದಾರೆ. ರುಕ್ಮಿಣಿ ಇಲ್ಲಿ ಶ್ರೀನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 'ಚಮಕ್' ಹಾಗೂ 'ಅಯೋಗ್ಯ' ಬಳಿಕ ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

  ಮುಖ್ಯ ಚಿತ್ರಮಂದಿರ : ಅನುಪಮಾ

  ಗಿಣಿ ಹೇಳಿದ ಕಥೆ

  ಗಿಣಿ ಹೇಳಿದ ಕಥೆ

  ಬುದ್ಧ ಚಿತ್ರಾಲಯ ಅಡಿಯಲ್ಲಿ ನಿರ್ಮಾಣ ಮಾಡಿರುವ ದೇವ ರಂಗಭೂಮಿ ನಾಯಕನಾಗಿ ನಟಿಸಿರುವ 'ಗಿಣಿ ಹೇಳಿದ ಕಥೆ' ನಾಳೆ ಬಿಡುಗಡೆಯಾಗುತ್ತಿದೆ. ನಾಗರಾಜ ಉಪ್ಪುಂದ ನಿರ್ದೇಶನವಿರುವ ಈ ಚಿತ್ರದಲ್ಲಿ ಗೀತಾಂಜಲಿ ನಾಯಕಿಯಾಗಿ ನಟಿಸಿದ್ದಾರೆ. ಮಾಲತೇಶ್, ವಿನಯ್ ನಿನಾಸಂ, ಫೈರೋಜ್ ಹಾಗೂ ನೀತು ಮುಂತಾದವರು ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

  ಮುಖ್ಯ ಚಿತ್ರಮಂದಿರ : ಪ್ರಸನ್ನ

  #10Years ಚಾಲೆಂಜ್ ಸ್ವೀಕರಿಸಿದ ತಾರೆಯರು: ಹತ್ತು ವರ್ಷಗಳ ಹಿಂದೆ ಇವರೆಲ್ಲ ಹೇಗಿದ್ರು.?

  ಲಾಕ್

  ಲಾಕ್

  ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳ ಪೈಕಿ 'ಲಾಕ್' ಸಿನಿಮಾ ಕೂಡ ಒಂದಾಗಿದೆ. ಪರಶುರಾಮ್ ಕಥೆ ಬರೆದು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಟ ಶಶಿಕುಮಾರ್, ಅವಿನಾಶ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ.

  ಮುಖ್ಯ ಚಿತ್ರಮಂದಿರ : ತ್ರಿವೇಣಿ

  ಯಾವ ಸಿನಿಮಾ ನೋಡ್ತಿರಾ?

  ಯಾವ ಸಿನಿಮಾ ನೋಡ್ತಿರಾ?

  'ಬೀರ್ ಬಲ್', 'ಗಿಣಿ ಹೇಳಿದ ಕಥೆ' ಹಾಗೂ 'ಲಾಕ್' ಸಿನಿಮಾಗಳ ಪೈಕಿ ನಾಳೆ ನೀವು ನೋಡಲು ಬಯಸುವ ಸಿನಿಮಾ ಯಾವುದು? ಹಾಗೂ ಈ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.

  English summary
  Gini helida kathe, Lock and Birbal kannada movie releasing on this friday (January 18th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X