'ಪತಿ ಬೇಕು.com' ಜೊತೆಗೆ ಈ ವಾರ ಮತ್ತೆರಡು ಚಿತ್ರಗಳು ಬಿಡುಗಡೆ
ಪ್ರತಿ ವಾರ ಎಂಟು, ಹತ್ತು ಸಿನಿಮಾಗಳು ಬರುತ್ತಿದ್ದ ಗಾಂಧಿನಗರದಲ್ಲಿ ಈ ವಾರ ಕೊಂಚ ಕಾಂಪಿಟೇಶನ್ ಕಡಿಮೆ ಇದೆ. ಯಾಕೆಂದರೆ, ಈ ವಾರ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ.
ನಟ ಶೀತಲ್ ಶೆಟ್ಟಿ ಅಭಿನಯದ 'ಪತಿ ಬೇಕು.com' ನಾಳೆ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಈ ಸಿನಿಮಾದ ಜೊತೆಗೆ ಹೊಸಬರ 'ಬಿಂದಾಸ್ ಗೂಗ್ಲಿ' ಹಾಗೂ 'ಮನೋರಥ' ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಮೂರು ಸಿನಿಮಾಗಳಲ್ಲಿ 'ಪತಿ ಬೇಕು.com' ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಕಂಟೆಂಟ್ ಇರುವ ಸಿನಿಮಾ ಎಂಬ ಭಾವನೆ ಟ್ರೇಲರ್ ನೋಡಿ ಮೂಡುತ್ತದೆ.
ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಮೂರು ಕನ್ನಡ ಸಿನಿಮಾಗಳ ವಿವರ ಮುಂದಿದೆ ಓದಿ.

ಪತಿ ಬೇಕು.com
ಹೊಸತನದಿಂದ ಕೂಡಿದ 'ಪತಿ ಬೇಕು.com' ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಈ ಚಿತ್ರ ನಾಳೆ (ಶುಕ್ರವಾರ) ಬಿಡುಗಡೆಯಾಗಲಿದೆ. ಶೀತಲ್ ಶೆಟ್ಟಿ ಈ ಸಿನಿಮಾದ ಮೂಲಕ ನಾಯಕ ನಟಿ ಆಗಿದ್ದಾರೆ. ರಾಕೇಶ್ ನಿರ್ದೇಶನ ಸಿನಿಮಾಗೆ ಇದೆ. ಮದುವೆಯ ವಯಸ್ಸಿಗೆ ಬಂದ ಒಬ್ಬ ಹೆಣ್ಣುಮಗಳ ಕಥೆ ಸಿನಿಮಾದಲ್ಲಿ ಇದೆ. ಅಂತು ನಾಳೆ ಶೀತಲ್ ಗೆ ಪತಿ ಸಿಗಲಿದ್ದಾನೆ.

ಬಿಂದಾಸ್ ಗೂಗ್ಲಿ
ಈ ಹಿಂದೆ 'ಸ್ಟೂಡೆಂಟ್ಸ್' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂತೋಷ್ಕುಮಾರ್ ಈಗ 'ಬಿಂದಾಸ್ ಗೂಗ್ಲಿ' ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಸಿನಿಮಾದ ಕಥೆ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಸಾಗಲಿದೆಯಂತೆ. ಆಕಾಶ್, ಮಮತಾ ರಾಹುತ್, ಶೃತಿ ರಾಮಕೃಷ್ಣ, ನಿಮಿತಾ ರತ್ನಾಕರ್, ಶಿಲ್ಪಾ ತಾರಬಳಗದಲ್ಲಿ ಇದ್ದಾರೆ.

ಮನೋರಥ
ಈ ವಾರ ತೆರೆಗೆ ಬರುವ ಚಿತ್ರಗಳ ಪಟ್ಟಿಯ ಕೊನೆಯ ಸಿನಿಮಾ 'ಮನೋರಥ'. ಈ ಚಿತ್ರ ಮಾನಸಿಕ ರೋಗದಿಂದ ಬಳಲುವ ವ್ಯಕ್ತಿಯ ಕಥೆಯನ್ನು ಹೊಂದಿದೆ. ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಗೆ ಈ ಇನಿಮಾ ಸೇರಿದಲಿದೆ. ರಾಜ್ ಚರಣ್ ಚಿತ್ರದ ನಾಯಕನಾಗಿದ್ದಾರೆ. ನಾಯಕಿ ಅಂಜಲಿಗೆ ಇದು ಮೊದಲ ಸಿನಿಮಾವಾಗಿದೆ.
ಶೀತಲ್ ಶೆಟ್ಟಿ ಸಂದರ್ಶನ
ಅಂದಹಾಗೆ, ಈ ವಾರ ರಿಲೀಸ್ ಆಗುತ್ತಿರುವ ಪತಿ ಬೇಕು. ಕುರಿತು ಚಿತ್ರದ ನಾಯಕಿ ಶೀತಲ್ ಶೆಟ್ಟಿ ಅವರ ಸಂದರ್ಶನದ ವಿಡಿಯೋ ಇಲ್ಲಿದೆ ವೀಕ್ಷಿಸಿ.


Click it and Unblock the Notifications











