twitter
    For Quick Alerts
    ALLOW NOTIFICATIONS  
    For Daily Alerts

    'ಪತಿ ಬೇಕು.com' ಜೊತೆಗೆ ಈ ವಾರ ಮತ್ತೆರಡು ಚಿತ್ರಗಳು ಬಿಡುಗಡೆ

    By Naveen
    |

    ಪ್ರತಿ ವಾರ ಎಂಟು, ಹತ್ತು ಸಿನಿಮಾಗಳು ಬರುತ್ತಿದ್ದ ಗಾಂಧಿನಗರದಲ್ಲಿ ಈ ವಾರ ಕೊಂಚ ಕಾಂಪಿಟೇಶನ್ ಕಡಿಮೆ ಇದೆ. ಯಾಕೆಂದರೆ, ಈ ವಾರ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ.

    ನಟ ಶೀತಲ್ ಶೆಟ್ಟಿ ಅಭಿನಯದ 'ಪತಿ ಬೇಕು.com' ನಾಳೆ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಈ ಸಿನಿಮಾದ ಜೊತೆಗೆ ಹೊಸಬರ 'ಬಿಂದಾಸ್ ಗೂಗ್ಲಿ' ಹಾಗೂ 'ಮನೋರಥ' ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಮೂರು ಸಿನಿಮಾಗಳಲ್ಲಿ 'ಪತಿ ಬೇಕು.com' ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಕಂಟೆಂಟ್ ಇರುವ ಸಿನಿಮಾ ಎಂಬ ಭಾವನೆ ಟ್ರೇಲರ್ ನೋಡಿ ಮೂಡುತ್ತದೆ.

    ಇದೇ ವಾರ ಶೀತಲ್ ಶೆಟ್ಟಿಗೆ ಪತಿ ಸಿಗುತ್ತಾರೆ ಇದೇ ವಾರ ಶೀತಲ್ ಶೆಟ್ಟಿಗೆ ಪತಿ ಸಿಗುತ್ತಾರೆ

    ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಮೂರು ಕನ್ನಡ ಸಿನಿಮಾಗಳ ವಿವರ ಮುಂದಿದೆ ಓದಿ.

    ಪತಿ ಬೇಕು.com

    ಪತಿ ಬೇಕು.com

    ಹೊಸತನದಿಂದ ಕೂಡಿದ 'ಪತಿ ಬೇಕು.com' ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಈ ಚಿತ್ರ ನಾಳೆ (ಶುಕ್ರವಾರ) ಬಿಡುಗಡೆಯಾಗಲಿದೆ. ಶೀತಲ್ ಶೆಟ್ಟಿ ಈ ಸಿನಿಮಾದ ಮೂಲಕ ನಾಯಕ ನಟಿ ಆಗಿದ್ದಾರೆ. ರಾಕೇಶ್ ನಿರ್ದೇಶನ ಸಿನಿಮಾಗೆ ಇದೆ. ಮದುವೆಯ ವಯಸ್ಸಿಗೆ ಬಂದ ಒಬ್ಬ ಹೆಣ್ಣುಮಗಳ ಕಥೆ ಸಿನಿಮಾದಲ್ಲಿ ಇದೆ. ಅಂತು ನಾಳೆ ಶೀತಲ್ ಗೆ ಪತಿ ಸಿಗಲಿದ್ದಾನೆ.

    ಬಿಂದಾಸ್ ಗೂಗ್ಲಿ

    ಬಿಂದಾಸ್ ಗೂಗ್ಲಿ

    ಈ ಹಿಂದೆ 'ಸ್ಟೂಡೆಂಟ್ಸ್' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂತೋಷ್​ಕುಮಾರ್ ಈಗ 'ಬಿಂದಾಸ್ ಗೂಗ್ಲಿ' ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಸಿನಿಮಾದ ಕಥೆ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಸಾಗಲಿದೆಯಂತೆ. ಆಕಾಶ್, ಮಮತಾ ರಾಹುತ್, ಶೃತಿ ರಾಮಕೃಷ್ಣ, ನಿಮಿತಾ ರತ್ನಾಕರ್, ಶಿಲ್ಪಾ ತಾರಬಳಗದಲ್ಲಿ ಇದ್ದಾರೆ.

    ಮನೋರಥ

    ಮನೋರಥ

    ಈ ವಾರ ತೆರೆಗೆ ಬರುವ ಚಿತ್ರಗಳ ಪಟ್ಟಿಯ ಕೊನೆಯ ಸಿನಿಮಾ 'ಮನೋರಥ'. ಈ ಚಿತ್ರ ಮಾನಸಿಕ ರೋಗದಿಂದ ಬಳಲುವ ವ್ಯಕ್ತಿಯ ಕಥೆಯನ್ನು ಹೊಂದಿದೆ. ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಗೆ ಈ ಇನಿಮಾ ಸೇರಿದಲಿದೆ. ರಾಜ್ ಚರಣ್ ಚಿತ್ರದ ನಾಯಕನಾಗಿದ್ದಾರೆ. ನಾಯಕಿ ಅಂಜಲಿಗೆ ಇದು ಮೊದಲ ಸಿನಿಮಾವಾಗಿದೆ.

    ಶೀತಲ್ ಶೆಟ್ಟಿ ಸಂದರ್ಶನ

    ಅಂದಹಾಗೆ, ಈ ವಾರ ರಿಲೀಸ್ ಆಗುತ್ತಿರುವ ಪತಿ ಬೇಕು. ಕುರಿತು ಚಿತ್ರದ ನಾಯಕಿ ಶೀತಲ್ ಶೆಟ್ಟಿ ಅವರ ಸಂದರ್ಶನದ ವಿಡಿಯೋ ಇಲ್ಲಿದೆ ವೀಕ್ಷಿಸಿ.

    English summary
    'Pathi Beku.com', 'Bindaas Googly' and 'Manoratha ' kannada movies will release Tomorrow (september 7th).
    Thursday, September 6, 2018, 11:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X