Don't Miss!
- Automobiles
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- Sports
Ranji Trophy: ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್ಗಳ ಭರ್ಜರಿ ಜಯ: ಸೆಮಿಫೈನಲ್ಗೆ ಕರ್ನಾಟಕ
- News
ಜಾರಕಿಹೊಳಿ ಸಿಡಿ ಹಗರಣ: ಸಿಬಿಐ ತನಿಖೆಗೆ ವಹಿಸಲು ಸರ್ಕಾರ ಸಿದ್ಧತೆ
- Technology
ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ! ವಿಶೇಷತೆ ಏನು?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೇ ಟೈಟಲ್.. ಮೂರು ಸಿನಿಮಾ.. ಹೊಯ್ ಯಾರದ್ದು 'ಹೊಯ್ಸಳ'?
ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಟೈಟಲ್‌ಗಳು ಸಾಕಷ್ಟು ವಿವಾದ ಸೃಷ್ಟಿಸಿರುವ ಉದಾಹರಣೆ ಇದೆ. ಒಂದೇ ಟೈಟಲ್‌ನಲ್ಲಿ ಎರಡೆರಡು ಸಿನಿಮಾಗಳು ನಿರ್ಮಾಣ ಆಗಿ ಮುಂದೆ ಟೈಟಲ್‌ಗಾಗಿ ಭಾರೀ ಗಲಾಟೆಗಳು ನಡೆದಿದೆ. ಈಗ 'ಹೊಯ್ಸಳ' ಟೈಟಲ್‌ನಲ್ಲಿ ಒಂದಲ್ಲ ಎರಡಲ್ಲ ಮೂರು ಸಿನಿಮಾ ನಿರ್ಮಾಣ ಆಗಿದೆ.
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ ನಟನೆಯ 'ಹೊಯ್ಸಳ' ಸಿನಿಮಾ ಶೂಟಿಂಗ್ ನಡೀಯಿದೆ. ವಿಜಯ್. ಎನ್ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದಾರೆ. ಮಾರ್ಚ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ. ಇದೀಗ ಇದೇ ಟೈಟಲ್‌ನಲ್ಲಿ ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿರುವುದು ಅಚ್ಚರಿ ಮೂಡಿಸಿದೆ.
ಸಣ್ಣ
ಸೂಜಿಗೆ
ಡಾಲಿ
ಹೆದರೋದು
ಯಾಕೆ?
ಇವತ್ತಿಗೂ
ಧನುಗೆ
ನೋವು
ಕೊಡುವ
ಆ
ಸಂಗತಿ
ಯಾವ್ದು?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮದ ಪ್ರಕಾರ ಒಂದೇ ಟೈಟಲ್‌ನಲ್ಲಿ 2 ಸಿನಿಮಾ ಮಾಡಲು ಅವಕಾಶ ಇಲ್ಲ. ಆದರೆ ಒಂದೇ ಟೈಟಲ್‌ನಲ್ಲಿ 3 ಸಿನಿಮಾ ಹೇಗೆ ನಿರ್ಮಾಣ ಆಯಿತು ಎನ್ನುವ ಪ್ರಶ್ನೆ ಮೂಡಿದೆ.

'ಹೊಯ್ಸಳ' ಸೆನ್ಸಾರ್ ಕಂಪ್ಲೀಟ್
ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಮೂರ್ತಿ ಎಂಬುವವರು 'ಹೊಯ್ಸಳ' ಹೆಸರಿನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ತಾವೇ ಹೀರೊ ಆಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಸಿನಿಮಾ ಸೆನ್ಸಾರ್ ಕೂಡ ಆಗಿದೆ. ಇದೀಗ ಇದೇ ಟೈಟಲ್‌ನಲ್ಲಿ ಧನಂಜಯ ಕೂಡ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ಗೊಂದಲ ಮೂಡಿದೆ. 'ಹೊಯ್ಸಳ' ಟೈಟಲ್‌ನಲ್ಲೇ ಅಭಯ್ ವೀರ್ ಎಂಬುವವರು ಹೀರೊ ಆಗಿ ಮತ್ತೊಂದು ಸಿನಿಮಾ ಕೂಡ ಸಿದ್ಧವಾಗ್ತಿದೆ.

'ಹೊಯ್ಸಳ' ಟೈಟಲ್ ಯಾರಿಗೆ?
ಒಂದು ಟೈಟಲ್‌ನಲ್ಲಿ ಎರಡೆರಡು ಸಿನಿಮಾಗಳು ನಿರ್ಮಾಣ ಆಗುವುದು ಇದೇ ಮೊದಲೇನಲ್ಲ. ಆದರೆ ಇತ್ತೀಚಿಗೆ ಇಂತಹ ಗೊಂದಲ ಪದೇ ಪದೇ ಎದುರಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮದಂತೆ ಒಂದೇ ಟೈಟಲ್‌ನಲ್ಲಿ 2 ಸಿನಿಮಾ ನಿರ್ಮಾಣಕ್ಕೆ ಅವಕಾಶ ಇಲ್ಲ. 10 ವರ್ಷಗಳ ನಂತರ ಒಂದು ಸಿನಿಮಾ ಟೈಟಲ್ ಮತ್ತೊಬ್ಬರು ಬಳಸಲು ಅವಕಾಶ ಇದೆ. ಆದರೆ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದಂತೆ ಎರಡು ವಾಣಿಜ್ಯ ಮಂಡಳಿಗಳಿವೆ. ಹಾಗಾಗಿ ಇಂತಹ ಗೊಂದಲ ಎದುರಾಗುತ್ತಿದೆ.

ಹೊಯ್ಸಳ ಮೂರ್ತಿ ಚಿತ್ರಕ್ಕೆ ಸೆನ್ಸಾರ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಹೊಯ್ಸಳ' ಎನ್ನುವ ಟೈಟಲ್ ರಿಜಿಸ್ಟರ್ ಮಾಡಿಸಿ, ಕೆಆರ್‌ಜಿ ಸಂಸ್ಥೆ ಸಿನಿಮಾ ಶೂಟಿಂಗ್ ನಡೆಸುತ್ತಿದೆ. ಮತ್ತೊಂದು ಕಡೆ ಕನ್ನಡ ವಾಣಿಜ್ಯಮಂಡಳಿಯಲ್ಲಿ ಹೊಯ್ಸಳ ಮೂರ್ತಿ ತಮ್ಮ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಗಿಸಿ ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಪ್ರೇಕ್ಷಕರಿಗೆ ಗೊಂದಲ
ಒಂದೇ ಟೈಟಲ್‌ನಲ್ಲಿ 2 ಸಿನಿಮಾ ಬಂದರೆ ಸಮಸ್ಯೆ ಏನಿಲ್ಲ. ಆದರೆ ಸಿನಿಮಾ ನೋಡುವ ಪ್ರೇಕ್ಷಕರಿಗೆ ಗೊಂದಲ ಶುರುವಾಗುತ್ತದೆ. ಇದೇ ಕಾರಣಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಒಮ್ಮೆ ಟೈಟಲ್ ರಿಜಿಸ್ಟರ್ ಆದಮೇಲೆ ಮತ್ತೆ ಯಾರು ಆ ಟೈಟಲ್ ಬಳಸಲು ಬಿಡುವುದಿಲ್ಲ. 'ಹೊಯ್ಸಳ' ಟೈಟಲ್‌ನಲ್ಲಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಹೀಗೆ 3 ಸಿನಿಮಾಗಳು ಬಂದರೆ ಗೊಂದಲ ಉಂಟಾಗುವುದು ಸರ್ವೇ ಸಾಮಾನ್ಯ. ಮುಂದಿನ ದಿನಗಳ ಈ ಟೈಟಲ್ ಗೊಂದಲ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು.