ಸಲ್ಮಾನ್ ಖಾನ್ ಗೆ ಪೈಪೋಟಿ ನೀಡಲು ರೆಡಿಯಾದ ರಿಷಿ
ನಾಳೆ ಶುಕ್ರವಾರ ಕನ್ನಡದ ಮೂರು ಸಿನಿಮಾಗಳು ಬಿಡುಗಡೆ ಸಿದ್ಧವಾಗಿದೆ. ಈ ಪೈಕಿ ಒಂದು ಡಬ್ಬಿಂಗ್ ಸಿನಿಮಾ ಇದೆ. ಸಲ್ಮಾನ್ ಖಾನ್ ಗೆ ಪೈಪೋಟಿ ನೀಡಲು ರಿಷಿ ರೆಡಿಯಾಗಿದ್ದಾರೆ.
'ಸಾರ್ವಜನಿಕರಲ್ಲಿ ಸುವರ್ಣಾವಕಾಶ' ರಿಷಿ ನಟನೆಯ ಸಿನಿಮಾ. ಈ ಚಿತ್ರ ನಾಳೆ (ಡಿಸೆಂಬರ್ 20) ಬಿಡುಗಡೆ ಆಗುತ್ತಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಹಿಟ್ ಆಗಿದೆ. ಹಾಡುಗಳು ಕೂಡ ತುಂಬ ಚೆನ್ನಾಗಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುವುದು ಟ್ರೇಲರ್ ಮೂಲಕ ತಿಳಿಯುತ್ತಿದೆ.
ರಿಷಿಗೆ ಧನ್ಯಾ ಬಾಲಕೃಷ್ಣ ನಾಯಕಿಯಾಗಿದ್ದಾರೆ. ರಂಗಾಯಣ ರಘು, ದತ್ತಣ್ಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ರಾಮಸ್ವಾಮಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ.

ಬಾಲಿವುಡ್ ಬಿಗ್ ಸಿನಿಮಾ 'ದಬಾಂಗ್ 3' ಡಿಸೆಂಬರ್ 20 ರಂದು ರಿಲೀಸ್ ಆಗುತ್ತಿದೆ. ಕನ್ನಡದ ಕಿಚ್ಚ ಸುದೀಪ್ ಸಿನಿಮಾದ ವಿಲನ್ ಆಗಿದ್ದಾರೆ. ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಸಾಯಿ ಮಂಜ್ರೇಕರ್ ಸಿನಿಮಾದ ನಾಯಕಿಯರು. 'ದಬಾಂಗ್ 3' ಚಿತ್ರ ಕನ್ನಡದಲ್ಲಿಯೂ ಡಬ್ ಆಗಿ ಬಿಡುಗಡೆ ಆಗುತ್ತಿದೆ.
'ಸಾರ್ವಜನಿಕರಲ್ಲಿ ಸುವರ್ಣಾವಕಾಶ' ಹಾಗೂ 'ದಬಾಂಗ್ 3' ಚಿತ್ರಗಳ ಜೊತೆಗೆ 'ಗರ್ನಲ್' ಎಂಬ ಸಿನಿಮಾ ತೆರೆ ಬರುತ್ತಿದೆ. ಜಿಜೆ ಶ್ರೀನಿವಾಸ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿ ಸಿನಿಮಾವಾಗಿದೆ.


Click it and Unblock the Notifications











