ನಾಳೆ (ಶುಕ್ರವಾರ) ಕನ್ನಡದ 3 ಸಿನಿಮಾಗಳು ಬಿಡುಗಡೆ
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ ಎಂದು ಪ್ರೇಕ್ಷಕರು ನಿರಾಸೆ ಆಗಿದ್ದರು. ನಾಳೆ (ಶುಕ್ರವಾರ) ಕನ್ನಡದ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
ಮಂಜು ಮಾಂಡವ್ಯ ನಿರ್ದೇಶನದ 'ಶ್ರೀ ಭರತ ಬಾಹುಬಲಿ' ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಮೂಲಕ ಅವರು ನಾಯಕ ನಟನಾಗಿದ್ದಾರೆ. ಮಂಜು ಮಾಂಡವ್ಯಗೆ ಚಿಕ್ಕಣ್ಣ ಸಾಥ್ ನೀಡಿದ್ದಾರೆ. ಈ ಸಿನಿಮಾ ನೋಡಿದ 10 ಅದೃಷ್ಟಶಾಲಿ ಪ್ರೇಕ್ಷಕರಿಗೆ ತಲಾ 5 ಲಕ್ಷ ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.
'ಶ್ರೀ ಭರತ ಬಾಹುಬಲಿ' ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಹಿಟ್ ಆಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಇದೆ. ಸರಾ ಹರೀಶ್ ಸಿನಿಮಾದ ನಾಯಕಿಯಾಗಿದ್ದಾರೆ. ಐಶ್ವರ್ಯ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ.

'ಗುಡುಮನ ಅವಾಂತರ' ಎಂಬ ಸಿನಿಮಾ ಸಹ ಈ ಶುಕ್ರವಾರ ತೆರೆಗೆ ಬರುತ್ತಿದೆ. ಡಬ್ಬಿಂಗ್ ಮಿನಿಂಗ್ ಡೈಲಾಗ್ ಗಳು ಟ್ರೇಲರ್ ನಲ್ಲಿ ತುಂಬಿಕೊಂಡಿವೆ. ಮುನಿರಾಜು ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ. ತಿಥಿ ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ನಟಿಸಿದ್ದಾರೆ.
"ಜನ್ ಧನ್" ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಎಚ್. 4) ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ. ಟಿ.ನಾಗಚಂದ್ರ ಕಥೆ - ಚಿತ್ರಕಥೆ ಮತ್ತು ಸಂಭಾಷಣೆ ನಿರ್ದೇಶನ ಮಾಡಿದ್ದಾರೆ. ತಾರಬಳಗದಲ್ಲಿ ಸುನಿಲ್, ಶಶಿ, ರಚನಾ ದಶರಥ್, ಅರುಣ್ ಎಲ್, ಲಕ್ಷ್ಮಣ್ ಮಾಸ್ಟರ್, ವಿನಾಯಕ್, ಸುಮನ್, ಕೆವಿನ್, ಜಯಲಕ್ಷ್ಮಿ ಮುಂತಾದವರಿದ್ದಾರೆ.


Click it and Unblock the Notifications











