ಹೊಸ ವರ್ಷದ ಮೊದಲ ವಾರ 3 ಸಿನಿಮಾಗಳ ಬಿಡುಗಡೆ
ಹೊಸ ವರ್ಷದ ಮೊದಲ ಶುಕ್ರವಾರ ಬಂದಿದೆ. ಮೊದಲ ವಾರ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆ ಆಗುತ್ತಿವೆ.
'ವೇಷಧಾರಿ', 'ರನ್ 2' ಹಾಗೂ 'ರಾಜೀವ' ನಾಳೆ (ಜನವರಿ 2) ಬಿಡುಗಡೆ ಆಗುತ್ತಿದೆ. ಈ ಮೂರು ಚಿತ್ರಗಳ ಪೈಕಿ ಎರಡು ಸಿನಿಮಾಗಳು ಹೊಸಬರ ಚಿತ್ರಗಳಾಗಿವೆ.
'ರಾಜೀವ' ಮಯೂರ್ ಪಟೇಲ್ ನಟನೆಯ ಸಿನಿಮಾ. ಐದು ವರ್ಷಗಳ ನಂತರ ಮತ್ತೆ ಈ ಸಿನಿಮಾದಲ್ಲಿ ಮಯೂರ್ ಕಾಣಿಸಿಕೊಂಡಿದ್ದಾರೆ. ಫ್ಲೈಯಿಂಗ್ ಮಂಜು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರೈತರ ಬಗ್ಗೆ ಸಿನಿಮಾದ ಕಥೆ ಇದೆ. ಅದೇ ಕಾರಣಕ್ಕೆ 'ಬಂಗಾರದ ಮನುಷ್ಯ' ಸಿನಿಮಾದಲ್ಲಿ ರಾಜ್ ಕುಮಾರ್ ಪಾತ್ರದ ಹೆಸರನ್ನೇ ಈ ಚಿತ್ರಕ್ಕೆ ಇಡಲಾಗಿದೆ. ಅಕ್ಷತ ಶ್ರೀಧರ್ ಶೆಟ್ಟಿ ಈ ಸಿನಿಮಾದ ನಾಯಕಿ ಆಗಿದ್ದಾರೆ.

'ರನ್ 2' ಸಿನಿಮಾ ಸಹ ಇದೇ ಶುಕ್ರವಾರದಿಂದ ರನ್ ಶುರು ಮಾಡುತ್ತಿದೆ. ಬಿ ಎಸ್ ಸಂಜಯ್ ಈ ಸಿನಿಮಾದ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳು ಸಿನಿಮಾದಲ್ಲಿವೆ. ಪವನ್ ಶೆಟ್ಟಿ ಹಾಗೂ ತಾರ ಶುಕ್ಲ ಸಿನಿಮಾದ ನಾಯಕಿಯಾಗಿದ್ದಾರೆ.
'ವೇಷಾಧಾರಿ' ಶಿವಾನಂದ್ ಭೂಷಿ ನಿರ್ದೇಶನದ ಸಿನಿಮಾ. ತಮ್ಮ ಕಾದಂಬರಿಯನ್ನೇ ಶಿವಾನಂದ್ ಸಿನಿಮಾ ಮಾಡಿದ್ದಾರೆ. ಆರ್ಯನ್, ಸೋನಮ್ ರೈ ಹಾಗೂ ಅಶ್ವಿತ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











