'ಕಥಾ ಸಂಗಮ' ಸೇರಿದಂತೆ ಈ ವಾರ 4 ಸಿನಿಮಾಗಳು ಬಿಡುಗಡೆ
ಕಳೆದ ವಾರ ಒಂಬತ್ತು ಚಿತ್ರಗಳು ತೆರೆಗೆ ಬಂದಿದ್ದವು. ಈ ವಾರ ಕನ್ನಡದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಪೈಕಿ ಸ್ಟಾರ್ ಸಿನಿಮಾಗಳು ಯಾವುದು ಇಲ್ಲ. 'ಕಥಾ ಸಂಗಮ' ಬಿಟ್ಟರೆ ಎಲ್ಲವೂ ಹೊಸಬರ ಪ್ರಯತ್ನಗಳಾಗಿವೆ.
ರಿಷಭ್ ಶೆಟ್ಟಿ ಬ್ಯಾನರ್ ನಲ್ಲಿ ಬರುತ್ತಿರುವ 'ಕಥಾ ಸಂಗಮ' ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. 7 ಕಥೆಗಳ ಸಂಗಮ ಇಲ್ಲಿದೆ. 7 ನಿರ್ದೇಶಕರು ಈ ಕಥೆಗಳನ್ನು ಹೇಳಿದ್ದಾರೆ. ಹೊಸ ಪ್ರಯೋಗದ ಈ ಸಿನಿಮಾ ಹೆಚ್ಚು ಕುತೂಹಲ ಹುಟ್ಟಿಸಿದೆ. ಕಿಶೋರ್, ಪ್ರಕಾಶ್ ಬೆಳವಾಡಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಯಜ್ಞ ಶೆಟ್ಟಿ, ಅವಿನಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.
'ಅಳಿದು ಉಳಿದವರು' ಆಶು ಬೆದ್ರ ಹಾಗೂ ಸಂಗೀತ ಭಟ್ ನಟನೆಯ ಸಿನಿಮಾವಾಗಿದೆ. ಅರವಿಂದ್ ಶಾಸ್ತ್ರಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಸ್ಪಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ. ನಿರ್ದೇಶಕ ಪವನ್ ಕುಮಾರ್ ಸಿನಿಮಾದಲ್ಲಿ ಒಂದು ಮಾಡಿದ್ದಾರೆ. ಹಾಸ್ಯ ನಟ ಧರ್ಮಣ್ಣ ಸಹ ಚಿತ್ರದಲ್ಲಿ ನಟಿಸಿದ್ದಾರೆ.

'ಐ 1' ಕೂಡ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕಿಶೋರ್, ಧೀರಜ್ ಪ್ರಸಾದ್ ಮತ್ತು ರಂಜನ್ ಎಂ.ಎಸ್.ಬಿ ಅಭಿನಯದ ಈ ಚಿತ್ರವನ್ನ ಶೈಲಜಾ ಪ್ರಕಾಶ್ ನಿರ್ಮಿಸಿದ್ದಾರೆ. ಆರ್.ಎಸ್.ರಾಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

'ಹಗಲು ಕನಸು' ಮಾಸ್ಟರ್ ಆನಂದ್ ನಟನೆಯ ಸಿನಿಮಾ. ಕಿರುತೆರೆ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದ ಮಾಸ್ಟರ್ ಆನಂದ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದೆ. ಸನಿಹ ಯಾದವ್ ಸಿನಿಮಾದ ನಾಯಕಿ ಆಗಿದ್ದಾರೆ.


Click it and Unblock the Notifications











