For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆಕಾಣುತ್ತಿರುವ ಕನ್ನಡ ಚಿತ್ರಗಳು ಯಾವುದು?

  By Bharath Kumar
  |

  ಈ ವಾರ ಸ್ಯಾಂಡಲ್ ವುಡ್ ವಿಭಿನ್ನ ಸಿನಿಮಾಗಳು ತೆರೆಕಾಣುತ್ತಿದೆ. ಈಗಾಗಲೇ ದೊಡ್ಡ ಪ್ರಚಾರದ ಮೂಲಕ ಎಲ್ಲರ ಮನೆ ಮಾತಾಗಿರುವ 'ರಾಜು ಕನ್ನಡ ಮೀಡಿಯಂ' ಸಿನಿಮಾ ಬೆಳ್ಳಿಪರದೆ ಮೇಲೆ ಕನ್ನಡದ ಪಾಠ ಹೇಳಲು ಬರ್ತಿದೆ.

  ಇದರ ಜೊತೆಗೆ ಮತ್ತೊಂದು ನಿರೀಕ್ಷೆಯ ಸಿನಿಮಾ '3 ಗಂಟೆ 30 ದಿನ 30 ಸೆಕೆಂಡ್' ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಇದೊಂದು ಲವ್ ಸ್ಟೋರಿಯಾಗಿದ್ದು, ಹಲವು ವಿಶೇಷತೆಗಳೊಂದಿಗೆ ಮನರಂಜಿಸಲು ಸಿದ್ದವಾಗಿದೆ.

  ವಿದೇಶದಲ್ಲಿ ಮಿಂಚಲಿದೆ '3 ಗಂಟೆ 30 ದಿನ 30 ಸೆಕೆಂಡ್'

  ಈ ಎರಡು ಕಮರ್ಷಿಯಲ್ ಚಿತ್ರಗಳ ಜೊತೆ ನಿಮ್ಮನ್ನೆಲ್ಲ ಭಯ ಪಡಿಸಲು ಹಾರರ್ ಸಿನಿಮಾವೊಂದು ಗಾಂಧಿನಗರಕ್ಕೆ ಬರ್ತಿದೆ. ಹಾಗಿದ್ರೆ, ಈ ಹಾರರ್ ಸಿನಿಮಾ ಯಾವುದು? ಈ ವಾರ ರಿಲೀಸ್ ಆಗುತ್ತಿರುವ ಮೂರು ಚಿತ್ರಗಳ ವಿಶೇಷತೆ ಏನು ಎಂದು ತಿಳಿಯಲು ಈ ಸ್ಟೋರಿ ಓದಿ.....

  3 ಗಂಟೆಯಲ್ಲಿ ನಡೆಯುವ ಕಥೆ

  3 ಗಂಟೆಯಲ್ಲಿ ನಡೆಯುವ ಕಥೆ

  ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ '3 ಗಂಟೆ 30 ದಿನ 30 ಸೆಕೆಂಡ್' ಸಿನಿಮಾ ಅಪ್ಪಟ ಪ್ರೇಮಕಥೆ. ಲಾಯರ್ ಹಾಗೂ ಚಾನಲ್ ಮಾಲೀಕನ ಮಗಳ ಲವ್ ಕಹಾನಿ. ಇದರ ಜೊತೆಗೆ ಯೋಧನೊಬ್ಬನ ಸಾಹಸಗಾಥೆ. ಹೀಗೆ, ಆಕ್ಷನ್, ಫೈಟ್, ಲವ್, ಹಾಗೂ ಸಂದೇಶವನ್ನೆಲ್ಲ ಮಿಶ್ರಣ ಮಾಡಿರುವ ಸ್ಪೆಷಲ್ ಸಿನಿಮಾ ಇದು.

  ಅರುಣ್ ಗೌಡ-ಕಾವ್ಯ ಶೆಟ್ಟಿ ಜೋಡಿ

  ಅರುಣ್ ಗೌಡ-ಕಾವ್ಯ ಶೆಟ್ಟಿ ಜೋಡಿ

  ಅಂದ್ಹಾಗೆ, ಈ ಚಿತ್ರದ ನಾಯಕ ಅರುಣ್ ಗೌಡ ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತು ನಾಯಕಿ ಕಾವ್ಯ ಶೆಟ್ಟಿ ಚಾನಲ್ ಮಾಲೀಕನ ಮಗಳು. ಇವರ ಜೊತೆ ಡೈನಾಮಿಕ್ ಹೀರೋ ದೇವರಾಜ್ ವಿಶೇಷ ಪಾತ್ರವನ್ನ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಮಧುಸೂದನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಅವರ ನಿರ್ಮಾಣ ಮಾಡಿದ್ದಾರೆ.

  ರಾಜು ಕನ್ನಡ ಮೀಡಿಯಂ

  ರಾಜು ಕನ್ನಡ ಮೀಡಿಯಂ

  ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾ. ಕನ್ನಡ ಮೀಡಿಯಂನಲ್ಲಿ ಓದಿದ ವ್ಯಕ್ತಿ, ಇಂದಿಗೆ ಇಂಗ್ಲೀಷ್ ಜಗತ್ತಿನಲ್ಲಿ ಹೇಗೆ ಕಾಂಪಿಟ್ ಮಾಡ್ತಾನೆ ಎನ್ನುವುದು ಚಿತ್ರಕಥೆ. '1st Rank ರಾಜು' ಖ್ಯಾತಿಯ ಗುರುನಂದನ್, ಅವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನರೇಶ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೆ.ಎ.ಸುರೇಶ್ ನಿರ್ಮಾಣ ಮಾಡಿದ್ದಾರೆ.

  'ರಾಜು' ಆಗಮನಕ್ಕೆ ದಾರಿ ಬಿಟ್ಟು ಕೊಟ್ಟ 'ಮಫ್ತಿ' ಸಿನಿಮಾ

  ಸುದೀಪ್ ಬಲ

  ಸುದೀಪ್ ಬಲ

  ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಸುದೀಪ್ ಅಭಿಮಾನಿಗಳು ನೋಡಲೇಬೆಕಾದ ಸಿನಿಮಾ ಎನಿಸಿದೆ. ಆಗರ್ಭ ಶ್ರೀಮಂತನ ಪಾತ್ರ ನಿರ್ವಹಿಸಿರುವ ಸುದೀಪ್, ಚಿತ್ರಕ್ಕೆ ಟ್ವಿಸ್ಟ್ ನೀಡಲಿದ್ದಾರಂತೆ.

  ಪ್ರೇಕ್ಷಕರನ್ನ ತೃಪ್ತಿಗೊಳಿಸಲಿದೆ 'ಅತೃಪ್ತ'

  ಪ್ರೇಕ್ಷಕರನ್ನ ತೃಪ್ತಿಗೊಳಿಸಲಿದೆ 'ಅತೃಪ್ತ'

  ಇವೆರಡು ರೆಗ್ಯೂಲರ್ ಚಿತ್ರಗಳ ಜೊತೆ ಹಾರರ್ ಸಿನಿಮಾ ತೆರೆಕಾಣುತ್ತಿದೆ. ಹೊಸಬರ ತಂಡವೇ ನಿರ್ಮಾಣ ಮಾಡಿರುವ ಅತೃಪ್ತ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಭಯ ಪಡಿಸಲು ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ನ್ನ ಸ್ಯಾಂಡಲ್ ವುಡ್ ಮಂದಿ ಮೆಚ್ಚಿಕೊಂಡಿದ್ದಾರೆ. ಕ್ಯಾಲನೂರು ನಾಗೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಯೋಗಿ ನಾಯಕರಾಗಿ ನಟಿಸಿದರೆ, ಅರ್ಜುನ್‌ಗೆ ನಾಯಕಿಯಾಗಿ ಶೃತಿ ರಾಜ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರಕ್ಕೆ ರಘುನಾಥ್ ರಾವ್ ಬಂಡವಾಳ ಹೂಡಿದ್ದಾರೆ.

  English summary
  Kannada movie raju kannada medium, 3 gante 30 dina 30 second and athruptha movies are releasing on january 19th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X