»   » ಎಂಎಂಎಸ್‌ನಲ್ಲಿ ಹಾಟ್ ಬ್ಯೂಟಿ ನಯನಕೃಷ್ಣ

ಎಂಎಂಎಸ್‌ನಲ್ಲಿ ಹಾಟ್ ಬ್ಯೂಟಿ ನಯನಕೃಷ್ಣ

Posted By:
Subscribe to Filmibeat Kannada

'ಕೊಟ್ಲಲ್ಲಪ್ಪೋ ಕೈ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ನಯಯ ಕೃಷ್ಣ ಗಾಂಧಿನಗರದಲ್ಲಿ ಸಖತ್ ಸುದ್ದಿ ಮಾಡಿದ್ದರು. ಚಿತ್ರದ ನಿರ್ದೇಶಕ ಋಷಿ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿ ಕಂಪ್ಲೇಂಟ್ ಜಡಿದಿದ್ದರು. ಅದೆಲ್ಲಾ ಹಳೆ ಕತೆ. ಈಗ 'ಎಂಎಂಎಸ್‌' ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ವಿಷಯ ಏನಪ್ಪಾ ಎಂದರೆ, ಬಾಲಿವುಡ್‌ನಲ್ಲಿ ಇತ್ತೀಚೆಗೆ ತೆರೆಕಂಡು ಕೊಂಚ ಮಟ್ಟಿಗೆ ಬಾಕ್ಸಾಫೀಸಲ್ಲಿ ಸೌಂಡ್ ಮಾಡಿದ 'ರಾಗಿಣಿ ಎಂಎಂಎಸ್' ಎಂಬ ಸಿನೆಮಾ ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಅದೇ ರೀತಿಯ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ ವೆಂಕಟೇಶ್ ಎಂಬುವವರು. ಕತೆ, ಚಿತ್ರಕತೆ ಮತ್ತು ನಿರ್ದೇಶನ ಪ್ರವೀಣ್.

ಈ ಚಿತ್ರಕ್ಕೆ ನಾಯಕಿ ನಯನ ಕೃಷ್ಣ. ಈ ಚಿತ್ರಕ್ಕೆ 'ನಯನಾ ಎಂಎಂಎಸ್' ಎಂದು ಹೆಸರಿಡಲಾಗಿದೆ. ನಟ ಕಿಶೋರ್ ಅಥವಾ ತಿಲಕ್ ಇಬ್ಬರಲ್ಲಿ ಒಬ್ಬರು ನಾಯಕರಾಗುವ ಸಾಧ್ಯತೆಗಳಿವೆ. ಸತ್ಯಘಟನೆಗಳ ಆಧಾರದ ಮೇಲೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆಯಂತೆ. ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಹುಡುಗಿರ ಸುತ್ತ ಕತೆ ಸುತ್ತುತ್ತದೆ.

ನಾಯಕಿ ಪ್ರಧಾನವಾದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಂಗಳೂರು ಹಾಗೂ ಕಾರವಾರದಲ್ಲಿ ನಡೆಯಲಿದೆ. ಈ ಚಿತ್ರಕ್ಕೆ ಶಂಕರ್ ಅವರ ಛಾಯಾಗ್ರಹಣವಿದೆ. ಒಟ್ನಲ್ಲಿ ನಯನ ಕೃಷ್ಣ ಚಿತ್ರಗಳು ಬಿಡುಗಡೆಯಾಗುವುದಕ್ಕೂ ಮುನ್ನವೇ ಸುದ್ದಿ ಮೇಲೆ ಸುದ್ದಿ ಮಾಡುತ್ತಿವೆ. (ಏಜೆನ್ಸೀಸ್)

English summary
Kotlalloppo Kai fame actress Nayana Krishna new film titled as Nayana MMS. The movie is being produced by Venkatesh and directing by Praveen. The story is about happenings in the life of two girls in Uttar Kannada district of Karnataka.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada