ಗುಂಡ್ರಗೋವಿ ಸತ್ಯ ಇನ್ಮುಂದೆ ಆಟೋ ಓಡಿಸ್ತಾರಂತೆ

ಸದ್ಯದಲ್ಲೇ ಶತದಿನೋತ್ಸವ ಆಚರಿಸುತ್ತಿರುವ ಚಿತ್ರ 'ಸಾರಥಿ'ಯಲ್ಲೂ ಕೂಡ ದರ್ಶನ್ ಆಟೋ ಡ್ರೈವರ್. ಬರಲಿರುವ ಚಿತ್ರ 'ಆಟೋ ರಾಜ' ದಲ್ಲಿ ಪ್ರೇಕ್ಷಕರೇ ಆಯ್ಕೆ ಮಾಡಿರುವ ನಟ ಅಜಯ್ ಅಟೋ ಡ್ರೈವರ್ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಎಲ್ಲಕ್ಕಿಂತ ಮೊದಲು ಆಟೋ ಡ್ರೈವರ್ ಪಾತ್ರ ಮಾಡಿದ್ದು ಶಂಕರ್ ನಾಗ್.
ಗುಂಡ್ರಗೋವಿ ಚಿತ್ರದಲ್ಲಿ ನಟಿಸಿದ್ದ ಸತ್ಯ, ಬರಲಿರುವ ಆಟೋ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಗುಂಡ್ರಗೋವಿ ನಿರ್ದೇಶಿಸಿದ್ದ ತಾರೇಶ್ ರಾಜ್ ಆಟೋ ಚಿತ್ರವನ್ನೂ ನಿರ್ದೆಶಿಸಲಿದ್ದಾರೆ. "ಇದು ಶಂಕ್ರಣ್ಣನ ಕನಸು" ಎಂಬ ಅಡಿಬರಹ ಚಿತ್ರಕ್ಕಿದೆ. ಕೆಲಸವಿಲ್ಲದೇ ಅಲೆಯುತ್ತಿರುವ ನಾಯಕ ಆಟೋರಾಜನಿಂದ ಸ್ಪೂರ್ತಿ ಪಡೆದು ಕೆಲಸ ಮಾಡಲು ಹೊರಡುವುದೇ ಚಿತ್ರದ ಕಥಾವಸ್ತು. (ಒನ್ ಇಂಡಿಯಾ ಕನ್ನಡ)
More from Filmibeat
English summary
In Upcoming Kannada movie 'Auto', Gundra Govi Satya acts and Taresh Raj directs this.


Click it and Unblock the Notifications











