ಸುದೀಪ್ ಜೊತೆ ಭೂಮಿ ತೂಕದ ಹೆಣ್ಣು ಭೂಮಿಕಾ

By Rajendra

ಕಡೆಗೂ ಅಂದುಕೊಂಡದನ್ನು ಸಾಧಿಸಿದ್ದಾರೆ ನಿರ್ಮಾಪಕ ಶಂಕರೇಗೌಡ. ತಮ್ಮ ನಿರ್ಮಾಣದ 'ವರದನಾಯಕ' ಚಿತ್ರಕ್ಕೆ ನಾಯಕಿಯಾಗಿ ಭೂಮಿ ತೂಕದ ಹೆಣ್ಣು ಭೂಮಿಕಾರನ್ನು ಕರೆದಂತಿದ್ದಾರೆ. ಈ ಚಿತ್ರಕ್ಕೆ ಅಯ್ಯಪ್ಪ ಶರ್ಮ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸುನಿಂದ ಸಾಗಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಚಿರಂಜೀವಿ ಸರ್ಜಾ ಹಾಗೂ ನಿಕೇಶಾ ಪಟೇಲ್ ಇದ್ದಾರೆ. ಸುದೀಪ್ ಹಾಗೂ ಅರ್ಜುನ್ ಸರ್ಜಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್‌‌ಗೆ ಜೊತೆಯಾಗಲಿದ್ದಾರೆ ಬಹುಭಾಷಾ ತಾರೆ ಭೂಮಿಕಾ.

ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಣ್ಣನಾಗಿ ಸುದೀಪ್ ಕಾಣಿಸಲಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ ಪ್ರಿಯಾಮಣಿ ಕರೆತರಲು ಚಿಂತಿಸಿದ್ದರು. ಆದರೆ ಸಾಕಷ್ಟು ಬ್ಯುಸಿಯಾಗಿರುವ ಪ್ರಿಯಾಮಣಿ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರರನ್ನು ಕೈಬಿಡಲಾಯಿತು.

ಸದ್ಯಕ್ಕೆ ಹೈದರಾಬಾದ್‌ನಲ್ಲಿ 'ಈಗ' ಚಿತ್ರೀಕರಣದಲ್ಲಿರುವ ಸುದೀಪ್ ಆಗಸ್ಟ್ 9ರಂದು ಬೆಂಗಳೂರಿಗೆ ಆಗಮಿಸಿ 'ವರದನಾಯಕ' ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಅವರು 'ರಾಜಾ ವಿಷ್ಣುವರ್ಧನ' ಹಾಡಿನ ಚಿತ್ರೀಕರಣ ಪಾಲ್ಗೊಳ್ಳಲಿದ್ದು ಬಳಿಕ ವರದನಾಯಕನಿಗೆ ಬಣ್ಣ ಹಚ್ಚಿಕೊಳ್ಳಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actress Bhoomika will be making her debut in Kannada films through Varada Nayaka produced by Shankare Gowda and directed by Aiyappa Sharma. She will be paired opposite Sudeepa who is playing Chiranjeevi Sarja's brother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X