ಕತ್ರಿನಾ ಕೈಫ್‌ಗೆ ತಕ್ಷಣ ಬಾಡಿಗೆ ಮನೆ ಬೇಕಾಗಿದೆಯಂತೆ
ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ತಕ್ಷಣಕ್ಕೆ ಬಾಡಿಗೆ ಮನೆ ಬೇಕಾಗಿದೆಯಂತೆ. ಸದ್ಯಕ್ಕೆ ಆಕೆ ವಾಸವಾಗಿರುವ ಮನೆಯಲ್ಲಿ ಲೀಕೇಜ್ ಪ್ರಾಬ್ಲಂ ಅಂತೆ. ಮುಂಬೈನಲ್ಲಿ ಸಿಕ್ಕಾಪಟ್ಟೆ ಮಳೆಯ ಕಾರಣ ಈಗಿರುವ ಮನೆಯ ಮಾಳಿಗಿ ಸೋರುತಿದೆಯಂತೆ. ಹೊಸ ಮನೆಗಾಗಿ ಆಕೆ ಮುಂಬೈನಲ್ಲಿ ತಡಕಾಡುತ್ತಿದ್ದಾರೆ.
ಆಕೆಯ ಮನಸ್ಸಿಗೆ ಒಪ್ಪುವ ಮನೆ ಸಿಕ್ಕಿಲ್ಲ ಎಂಬುದು ಲೇಟೆಸ್ಟ್ ಮಾಹಿತಿ. ಈಗಿರುವ ಮನೆಯ ಎಲ್ಲ ಕಡೆ ಲೀಕೇಜ್ ಪ್ರಾಬ್ಲಂ ಇದ್ದು ಆಕೆಯ ಬೆಡ್ ರೂಂನಲ್ಲಿ ಮಾತ್ರ ಬಂದೋಬಸ್ತ್ ಆಗಿದೆಯಂತೆ. ಬೆಡ್‌ರೂಂನಲ್ಲೇ ಎಷ್ಟೊತ್ತು ಅಂತ ಕಾಲ ಕಳೆಯಲಿಕ್ಕೆ ಸಾಧ್ಯ?
ಕತ್ರಿನಾಗೆ ಈ ರೀತಿ ಸೋರುವ ಮನೆ ಕೊಡಿಸಿದಪುಣ್ಯಾತ್ಮ ಯಾರಪ್ಪ ಎಂದರೆ ರಣಬೀರ್ ಕಪೂರ್ ಅಂತೆ. ಈ ಹಿಂದೆ ಸಲ್ಲು ಕೂಡ ಒಂದು ಮನೆ ಕೊಡಿಸಿದ್ದ ಅಲ್ಲೂ ಆಕೆಗೆ ಅಡ್ಜೆಸ್ಟ್ ಮಾಡಿಕೊಳ್ಳಲು ಸಾಧ್ಯವಾಗದೆ ಕಡೆಗೆ ರಣಬೀರ್ ತೋರಿಸಿದ ಮನೆ ಓಕೆ ಎಂದಿದ್ದಳು. ಈಗ ಈ ತಿರುಬೋಕಿಗಳಿಗೆ ಹೇಳಿ ಪ್ರಯೋಜನವಿಲ್ಲ ಎಂದು ಸ್ವತಃ ಆಕೆಯೇ ಮನೆ ಹುಡುಕುತ್ತಿದ್ದಾರಂತೆ. (ಏಜೆನ್ಸೀಸ್)
More from Filmibeat
English summary
Bollywood sources claims Katrina Kaif is again on house hunt. Her her house on Waterfield road at which she is presently residing is horrible. The roof of the house started sucking water due to roof leakage.
ಕತ್ರಿನಾ ಕೈಫ್ ಸಲ್ಮಾನ್ ಖಾನ್ ಬಾಡಿಗೆ ಮನೆ ಬಾಲಿವುಡ್ ರಣಬೀರ್ ಕಪೂರ್ katrina kaif salman khan rent house bollywood


Click it and Unblock the Notifications











