ಅತ್ತೆಯಾಗಿ ಎರಡನೆ ಇನ್ನಿಂಗ್ಸ್ ಆರಂಭಿಸಿದ ಮೀನಾ

By Rajendra

ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ವಿದ್ಯಾ ಸಾಗರ್ ಅವರನ್ನು ಕೈಹಿಡಿದ ಬಳಿಕ ನಟಿ ಮೀನಾ ಚಿತ್ರರಂಗದಿಂದ ಏಳು ಹೆಜ್ಜೆ ದೂರ ಸರಿದಿದ್ದರು. ಒಂದು ಮಗುವಿನ ತಾಯಿಯಾಗಿರುವ ಈಕೆ ಈಗ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಈ ಬಾರಿ ಆಕೆ ನಾಯಕ ನಟಿ ಅಲ್ಲ. ಅತ್ತೆಯಾಗಿ ತೆರೆಯ ಮೇಲೆ ರಂಗಪ್ರವೇಶ ಮಾಡಿದ್ದಾರೆ.

ತೆಲುಗಿನಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರ ಅತ್ತೆಯಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ ಮೀನಾ. ತೆಲುಗಿನಲ್ಲಿ ಯಶಸ್ವಿ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ವಿ ವಿ ವಿನಾಯಕ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮೀನಾ ಮೊಟ್ಟಮೊದಲ ಬಾರಿಗೆ ಅತ್ತೆಯಾಗಿ ಕಾಣಿಸಲಿರುವ ಚಿತ್ರ ಇದಾಗಲಿದೆ.

ಮೀನಾ ಅವರು ಕನ್ನಡದ ಮೈ ಆಟೋಗ್ರಾಫ್, ಮಹಾಸಾಧ್ವಿ ಮಲ್ಲಮ್ಮ, ಗೌಡ್ರು, ಸ್ವಾತಿ ಮುತ್ತು, ಸಿಂಹಾದ್ರಿಯ ಸಿಂಹ, ಶ್ರೀಮಂಜುನಾಥ, ಪುಟ್ನಂಜ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಹೆಂಡ್ತೀರ್ ದರ್ಬಾರ್' ಚಿತ್ರ ಮೀನಾ ಅಭಿನಯದ ಕೊನೆಯ ಕನ್ನಡ ಚಿತ್ರ. ಮುಂದೊಂದು ದಿನ ಕನ್ನಡಕ್ಕೂ ಅವರು ಅತ್ತೆ, ಅಮ್ಮನಾಗಿ ಬರುತ್ತಾರೋ ಏನೋ ಗೊತ್ತಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Renowned South Indian actress Meena, who retired from films after her marriage with Vidyasagar a few years ago, returns! she appear as the mother-in-law with young Telugu superstar Ram Charan Teja's film to be directed by V.V. Vinayak.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X