ಎಲ್ಲರೂ ಬಾದಾಮಿ ಹಾಲು ಕುಡಿಯಿರಿ; ರಮ್ಯಾ ಆನಂದ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುರ್ಚಿ ಶೇಕ್ ಆದದ್ದೇ ತಡ ಗೋಲ್ಡನ್ ಗರ್ಲ್ ರಮ್ಯಾ ಹಬ್ಬದ ಮೂಡ್‌ನಲ್ಲಿದ್ದಾರೆ. ನನಗಂತೂ ತುಂಬಾ ಖುಷಿಯಾಗುತ್ತಿದೆ. ಎಲ್ಲರೂ ಬಾದಾಮಿ ಹಾಲು ಕುಡಿಯಿರಿ ಎಂದು ಟ್ವೀಟ್ ಮಾಡಿ ರಮ್ಯಾನಂದಪಟ್ಟಿದ್ದಾರೆ.
ರಮ್ಯಾ ಈಗ ಮದುವೆ ಮೂಡ್‍ನಲ್ಲಿದ್ದು "ನಿದ್ದೆ ಬರ್ತಿಲ್ಲಾ ನನಗೆ ನಿದ್ದೆ ಬರ್ತಿಲ್ಲಾ ನಾಳೆ ನನ್ನ ಮದುವೆ ಅಂಥ ನಿದ್ದೆ ಬರ್ತಿಲ್ಲಾ..." ಎಂದು ಹಾಡುವುದೊಂದು ಬಾಕಿ ಇದೆ. ಯುವ ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿರುವ ರಮ್ಯಾ ಈ ಹಿಂದೆಮ್ಮೊ ಬಿಜೆಪಿ ಮೇಲೆ ಉರಿದುಬಿದ್ದಿದ್ದರು.
ಅಕ್ರಮ ಗಣಿಗಾರಿಕೆಯ ಹಣ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂದಾಯವಾಗಿರುವುದಾಗಿ ಲೋಕಾಯುಕ್ತ ವರದಿ ಸಲ್ಲಿಕೆಯ ಹಿನ್ನೆಲೆಯಲ್ಲಿ ಪದತ್ಯಾಗಕ್ಕೆ ಹೈಕಮಾಂಡ್ ಆದೇಶಿಸಿದೆ. ಈ ಸಂತಸವನ್ನು ಹಾಲು ಕುಡಿದು ಎಂಜಾಯ್ ಮಾಡಿ ಎಂದಿದ್ದಾರೆ ರಮ್ಯಾ. ಆದರೆ ಅಪ್ಪಿತಪ್ಪಿಯೂ ಅಪಾರ್ಥ ಮಾಡಿಕೊಂಡು ಆಲ್ಕೋಹಾಲ್ ಕುಡಿಬೇಡಿ. (ದಟ್ಸ್‌ಕನ್ನಡ ಸಿನಿವಾರ್ತೆ)
English summary
Kannada actress Ramya celebrates on her own way over Karnataka political developments and BS Yeddyurappa resignation drama. She tweets as "What a superb day!! I'm sooo happy! Yelaru badami haal kudeeri!!!".


Click it and Unblock the Notifications