twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಜೊತೆ ಗೋಲ್ಡನ್ ಗರ್ಲ್ ರಮ್ಯಾ

    By Rajendra
    |

    ಗೋಲ್ಡನ್ ಗರ್ಲ್ ರಮ್ಯಾ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದೇ ಚಿತ್ರದಲ್ಲಿ ಎಂದರೆ ಅಭಿಮಾನಿಗಳ ಕಣ್ಣಿಗೆ ಹಬ್ಬ ತಾನೆ. ಹೌದು ಇಬರಿಬ್ಬರೂ ಈಗ ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮುನಿರತ್ನ ನಿರ್ಮಿಸುತ್ತಿರುವ ಉಪೇಂದ್ರಮತ್ತು ಪೇಮ್ ಮುಖ್ಯಭೂಮಿಕೆಯಲ್ಲಿರುವ 'ಡೈರೆಕ್ಟರ್' ಚಿತ್ರದಲ್ಲಿ ಒಂದಾಗುತ್ತಿದ್ದಾರೆ.

    ಈ ಹಿಂದೆ 'ಗೌರಮ್ಮ' ಚಿತ್ರದಲ್ಲಿ ಉಪೇಂದ್ರ ಜೊತೆ ರಮ್ಯಾ ಅಭಿನಯಿಸಿದ್ದರು. ಅದಾದ ಬಳಿಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಇನ್ನೂ ಡಬ್ಬದಲ್ಲೇ ಇರುವ ಆ ಚಿತ್ರ ಸದ್ಯಕ್ಕೆ ತೆರೆಕಾಣುವ ಲಕ್ಷಣಗಳು ಕಾಣುತ್ತಿಲ್ಲ.

    ತಮ್ಮ ಚಿತ್ರಕ್ಕೆ ರಮ್ಯಾ ಆಯ್ಕೆಯಾಗಿರುವುದನ್ನು ಚಿತ್ರದ ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದು, ಕನ್ನಡ ಚಿತ್ರರಂಗದ ಮೂರು ಬಿಗ್ ಸ್ಟಾರ್‌ಗಳು ತಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 18ರಂದು ಸೆಟ್ಟೇರಲಿರುವ ಈ ಚಿತ್ರಕ್ಕೆ ಸಹಿ ಹಾಕಿರುವ ಬಗ್ಗೆ ರಮ್ಯಾ ಕೂಡ ಖುಷಿಯಾಗಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Golden girl Ramya to act with Real Star Upendra in his upcoming movie Director. Actor-Director Prem is playing another important role in the film. The producer of the movie Munirathna has confirming Ramyas selection. The film is a remake of Malayalam hit Udayanu Taaram.
    Thursday, June 30, 2011, 15:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X