ನಮಗೂ ಅದಕ್ಕೂ ಈಗ ಸಂಬಂಧವಿಲ್ಲ: ರಾಘಣ್ಣ

<ul id="pagination-digg"><li class="previous"><a href="/news/30-anna-bond-kicks-out-govindaya-namaha-aid0172.html">« Previous</a>

Raghavendra Rajkumar
ಈ ವಿಷಯವನ್ನು ಅಣ್ಣಾಬಾಂಡ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಗಮನಕ್ಕೆ ತಂದಾಗ "ನಾನು ಈಗಾಗಲೇ ಹಂಚಿಕೆ (ಡಿಸ್ಟ್ರಿಬ್ಯೂಷನ್) ಹಕ್ಕುಗಳನ್ನು ಮಾರಾಟ ಮಾಡಿದ್ದೇನೆ. ಹಾಗಾಗಿ ನಾನು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಲಾರೆ. ಈಗೇನಿದ್ದರೂ ಇದು ಚಿತ್ರಮಂದಿರಗಳ ಮಾಲೀಕರು ಹಾಗೂ ಹಂಚಿಕೆದಾರರು ಪರಿಹಾರ ಕಂಡುಕೊಳ್ಳಬೇಕಾದ ವಿಷಯ" ಎಂದಿದ್ದಾರೆ.

ಆದರೆ ಕನ್ನಡ ಚಿತ್ರರಂಗವೆಂದರೆ ಡಾ ರಾಜ್ ಕುಮಾರ್ ಕುಟುಂಬ. ಯಾರಿಗೇ ಅನ್ಯಾಯವಾದರೂ ನ್ಯಾಯಕ್ಕಾಗಿ ಓಡುವುದು ಆ ಮನೆಯ ಕಡೆಗೇ. ಹೀಗಿರುವಾಗ ಈಗ ಅದು ನಮಗೆ ಸಂಬಂಧಿಸದ ವಿಷಯ ಎಂಬ ರಾಘಣ್ಣನ ಮಾತು ಗೋವಿಂದಾಯ ನಮಃ ಚಿತ್ರ ನಿರ್ಮಾಪಕರಿಗೆ ತೀವ್ರ ನೋವನ್ನುಂಟುಮಾಡಿದೆ. ನ್ಯಾಯ ಹೇಳಬೇಕಾಗಿರುವವರಿಂದಲೇ ಅನ್ಯಾಯವಾದ ಮೇಲೆ ಇನ್ನೆಲ್ಲಿ ಹೋಗುವುದೆಂದು ತಿಳಿಯದೇ ಸುರೇಶ್ ಬಾಬು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ ಎನ್ನಲಾಗಿದೆ.

ಈಗ ಎಲ್ಲರ ಚಿತ್ತ ಮತ್ತೆ ರಾಘಣ್ಣನ ಕಡೆಗೇ ಹೊರಳಿದೆ. ಡಾ ರಾಜ್, ಯಾವುದೇ ನಿರ್ಮಾಪಕರಿಗೆ ಅನ್ಯಾಯವಾಗುವುದನ್ನು ಸಹಿಸುತ್ತಿರಲಿಲ್ಲ. ಇತ್ತೇಚಿಗೆ ಶಿವರಾಜ್ ಕುಮಾರ್ ಅಪ್ಪಾಜಿ ಆಶಯದ ವಿರುದ್ಧ ನಡೆದುಕೊಳ್ಳಲು ಯಾರಿಗೂ ಬಿಡುವುದಿಲ್ಲವೆಂದು ಗುಡುಗಿದ್ದಾರೆ ಕೂಡ. ಅಂದ ಮೇಲೆ ಸ್ವತಃ ಅವರಿಂದಲೇ ಯಾರಿಗೂ ಅನ್ಯಾಯವಾಗುವುದಿಲ್ಲ ಎಂಬ ಬಲವಾದ ನಂಬಿಕೆಯನ್ನು ಸುರೇಶ್ ಬಾಬು ಹೊಂದಿದ್ದಾರೆ. ಮುಂದೇನಾಗುವುದೆಂದು ಕಾದು ನೋಡಬೇಕಾಗಿದೆ ಅಷ್ಟೇ... (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/30-anna-bond-kicks-out-govindaya-namaha-aid0172.html">« Previous</a>

More from Filmibeat

English summary
Govindaya Namaha is being replaced by Puneet Rajkumar starrer Anna Bond in major theatres, which has irked the makers of Komal starrer film&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X