ಚಿತ್ರನಟಿ ಸೌಮ್ಯಗೆ ಇರಿದ ಭಗ್ನಪ್ರೇಮಿ ಪೊಲೀಸ್ ಪೇದೆ

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಭಗ್ನಪ್ರೇಮ ಕಾರಣ ಎನ್ನಲಾಗಿದೆ. ಜ್ಯುಡಿಷಿಯಲ್ ಲೇ ಔಟ್ ನ ತನ್ನ ಮನೆಗೆ ಕರೆದುಕೊಂಡು ಹೋಗಿ ಆತ ಈ ಕೃತ್ಯ ಎಸಗಿದ್ದು, ಸೌಮ್ಯಳ ಹೊಟ್ಟೆ, ಕತ್ತು, ಕೆನ್ನೆ ಹಾಗೂ ಗಲ್ಲ ಸೇರಿದಂತೆ 13 ಕಡೆ ಇರಿದಿದ್ದಾನೆ. ಮಡಿಕೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದ ಅನಿಲ್, ಕರ್ತವ್ಯ ಲೋಪದಡಿ ವಜಾಗೊಂಡಿದ್ದರು.
ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾಗ ಪರಿಚಯವಾದ ಸೌಮ್ಯ ಜೊತೆ ಪ್ರೇಮಾಂಕುರವಾಗಿತ್ತು. ತನಗೆ ಮದುವೆಯಾಗಿದೆ ಎಂಬ ವಿಚಾರವನ್ನು ಸೌಮ್ಯಳಿಂದ ಮುಚ್ಚಿಟ್ಟಿದ್ದ ಆತ, ಪತ್ನಿ ರಂಜನಿ ಹಾಗೂ ಮಗುವನ್ನು ಕುಶಾಲನಗರದ ಮನೆಯಲ್ಲಿಟ್ಟಿದ್ದ. ಬ್ಯಾಚುಲರ್ ಎಂದ ತಿಳಿದ ಸೌಮ್ಯ ಲವ್ವಲ್ಲಿ ಬಿದ್ದು ಆತನಿಗೆ ಬಾಡಿಗೆ ಮನೆ ಮಾಡಿ ಕೊಟ್ಟಿದ್ದರು.
ಇತ್ತೀಚಿಗೆ ಆತನಿಗೆ ಮದುವೆಯಾಗಿರುವ ವಿಷಯ ತಿಳಿದ ಸೌಮ್ಯ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದರು. ಆತನ ಮದುವೆಯ ಒತ್ತಾಯಕ್ಕೆ ಸೌಮ್ಯ ಮಣಿಯದ್ದರಿಂದ ಮಂಗಳವಾರ (ನವೆಂಬರ್ 29) ದಂದು ಮನೆಗೆ ಮಾತನಾಡಲು ಕರೆಸಿಕೊಂಡು ಜಗಳವಾಡಿ ಈ ಕೃತ್ಯ ಎಸಗಿದ್ದಾನೆ. ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೌಮ್ಯ ಸ್ಥಿತಿ ಗಂಭೀರವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











