ಸೋಫಿ ಹಯಾತ್‌ಗೆ ಬಾಬಾ ರಾಮ್ ದೇವ್ ಕ್ಲೀನ್ ಬೌಲ್ಡ್

By Rajendra

ಬಾಬಾ ರಾಮ್ ದೇವ್ ಯೋಗ ಬಿಟ್ಟು ಸಿನಿಮಾಗೆ ಯಾವಾಗ ಎಂಟ್ರಿ ಕೊಟ್ರಪ್ಪ. ಡ್ರಾಮಾ ಕ್ವೀನ್ ರಾಖಿ ಸಾವಂತ್ ಬಿಟ್ಟ ಪ್ರೇಮ ಬಾಣವೇನಾದರೂ ಬಾಬಾ ರಾಮ್ ದೇವ್ ಎದೆಗೆ ನಾಟಿತಾ, ಎಂಬ ಅನುಮಾನ ಬರುತ್ತಿದೆಯೇ? ನವದೆಹಲಿಯಲ್ಲಿ ನಡೆದ ಬಾಬಾರ ರಾಮಲೀಲೆಗಳನ್ನು ಓದಿ.

ಇತ್ತೀಚೆಗೆ ಬಾಲಿವುಡ್ ಚಿತ್ರವೊಂದು 'ಭಾಯ್ ಕಾ ಮಾಲ್ ಹೈ' ಸೆಟ್ಟೇರಿತು. ನವದೆಹಲಿಯಲ್ಲಿ ಸೆಟ್ಟೇರಿದ ಈ ಚಿತ್ರದ ಮುಹೂರ್ತಕ್ಕೆ ಬಾಬಾ ರಾಮ್ ದೇವ್ ಬಂದಿದ್ದರು. ಆದರೆ ಇವರು ಅಸಲಿ ಬಾಬಾ ಅಲ್ಲ ನಕಲಿ ಬಾಬಾ. ನಟ ಸುನಿಲ್ ತಲ್ವಾರ್ ಯೋಗ ಗುರು ಗೆಟಪ್ಪಲ್ಲಿ ಬಂದಿದ್ದವರು.

ಅವರ ಗೆಟಪ್ಪನ್ನು ನೋಡಿದವರು ಕ್ಷಣಕಾಲ ಅವಾಕ್ಕಾದರು. ಈ ಚಿತ್ರ ಬಾಬಾ ರಾಮ್ ದೇವ್ ಅವರ ಕುರಿತದ್ದಾಗಿದೆ. ಅನಿಲ್ ಗೋಯಲ್ ನಿರ್ದೇಶಿಸುತ್ತಿರುವ ಚಿತ್ರವಿದು. ಬಾಬಾಗೆ ಹೀರೋಯಿನ್ ಆಗಿ ಹಾಲಿವುಡ್ ತಾರೆ ಸೋಫಿ ಹಯಾತ್ ಅಭಿನಯಿಸಲಿದ್ದಾರೆ. 2012ರ ಕೊನೆಗೆ ಈ ಚಿತ್ರ ತೆರೆಕಾಣುವ ಸಾಧ್ಯತೆಗಳಿವೆ. (ಏಜೆನ್ಸೀಸ್)

More from Filmibeat

English summary
It was a great surprise at the mahurtha of the upcoming Bollywood movie Bhai Ka Maal Hai, when Baba Ramdev turned up to the event in New Delhi on Monday. But it was not Ramdev. It was his look-alike actor Sunil Talwar, who was dressed up like the Yoga Guru for the shooting of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X