ಧನುಷ್ 'ಕೊಲಾವರಿ...ಡಿ' ಹಾಡು ದಾಖಲೆಯ ವೀಕ್ಷಣೆ

Darshan
ತಮಿಳು ನಟ, ರಜನಿಕಾಂತ್ ಅಳಿಯ ಧನುಷ್ ಬರೆದು ಹಾಡಿರುವ 'ಕೊಲಾವರಿ ಡಿ...' ಹಾಡು ಊಹಿಸಲಾರದಷ್ಟು ಜನಪ್ರಿಯತೆ ಪಡೆದಿದೆ. ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ಈ ಹಾಡು ಪಡೆದಿರುವ 'ವ್ಯೂಸ್' ನ್ಯೂಸ್ ಕೇಳಿದರೆ ನೀವು ತಲೆತಿರುಗಿ ಬೀಳುವುದೊಂದೇ ಬಾಕಿ.

ಈ ಹಾಡಿಗೆ ಬಂದಿರುವ ಒಟ್ಟು ವ್ಯೂಸ್ 10,559,994. ನಾವು ದಾಖಲಿಸುವಷ್ಟರಲ್ಲಿ ಅದು ಇನ್ನಷ್ಟು ಹೆಚ್ಚಾಗಿರುತ್ತದೆ. ನವೆಂಬರ್ 16 ರ ಒಳಗೆ ಬಂದಿರುವುದು ಮಾತ್ರ ಆಫೀಶಿಯಲ್. ನಂತರ ಹಿಂದಿನ ಬಾಗಿಲಿನಿಂದ ಬಂದಂಥವು. ಏನೇ ಆಗಲಿ, ಈಗ ಚಿತ್ರದಲ್ಲಿ ಈ ಹಾಡನ್ನು ವಿಶೇಷವಾಗಿ ಗಮನಿಸಲಿರುವುದು ಗ್ಯಾರಂಟಿ.

ಈ ಜನಪ್ರಿಯ ಹಾಡು ಬರಲಿರುವ ತಮಿಳು ಚಿತ್ರ '3' ಯದ್ದು. ಇದನ್ನು ಧನುಷ್ ಪತ್ನಿ, ರಜನಿ ಮಗಳು 'ಐಶ್ವರ್ಯ ಧನುಷ್' ನಿರ್ದೇಶಿಸುತ್ತಿದ್ದಾರೆ. ಧನುಷ್ ಬರೆದಿರುವ ಈ ಹಾಡಿಗೆ ತಮಿಳು ಉದಯೋನ್ಮುಖ ಸಂಗೀತ ನಿರ್ದೇಶಕ ಅನಿರುದ್, ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಬಂದಮೇಲೆ ಇನ್ನೇನೇನು ದಾಖಲೆ ಬರೆಯಲಿದೆಯೋ... (ಏಜೆನ್ಸೀಸ್)

English summary
Dhanush could not imagine or expected that his 'Kolaveri di' would got such a massive response. With thunderous feedback from all across India, the track on Youtube has crossed 10-million views.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X