»   » ಪ್ರಕೃತಿ ಸೊಬಗಿನಲ್ಲಿ ಮಿಂದೆದ್ದ ಈ ಸಂಭಾಷಣೆ

ಪ್ರಕೃತಿ ಸೊಬಗಿನಲ್ಲಿ ಮಿಂದೆದ್ದ ಈ ಸಂಭಾಷಣೆ

Posted By:
Subscribe to Filmibeat Kannada

ಪುಣ್ಯಕ್ಷೇತ್ರಗಳ ನೆಲದಲ್ಲಿ, ಪ್ರಕೃತಿಯ ಸೊಬಗಿನಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಪೂರೈಸಿದ 'ಈ ಸಂಭಾಷಣೆ'ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಪೂರ್ಣವಾಗಿದೆ ಎಂದು ನಿರ್ಮಾಪಕರು ತಿಳಿಸಿದರು.ಚಿತ್ರೀಕರಣ ಹಾಗೂ ನಂತರದ ಚಟುವಟಿಕೆ ಸರಾಗವಾಗಿ ಸಾಗಲು ಕಾರಣರಾದ ನಿರ್ದೇಶಕರು ಹಾಗೂ ಚಿತ್ರತಂಡವನ್ನು ಮಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜಶೇಖರ್ ಪ್ರಥಮ ನಿರ್ದೇಶನದ 'ಈ ಸಂಭಾಷಣೆ'ಯನ್ನು ಮೇಜರ್ ಶ್ರೀನಿವಾಸ್‌ಪೂಜಾರ್ ಹಾಗೂ ಜ್ಯೋತಿಬಸವರಾಜ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಇಮ್ರಾನ್, ಮದನ್‌ಹರಿಣಿ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಮುಂತಾದವರಿದ್ದಾರೆ.

*****

'ಜಾಲಿಡೇಸ್'ಗೆ ಈಗ ಹ್ಯಾಪಿಡೇಸ್

ಯಂಗ್ ಡ್ರೀಂಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾದಿರೆಡ್ಡಿ ಪರಮ್ ಅವರು ನಿರ್ಮಿಸುತ್ತಿರುವ 'ಜಾಲಿಡೇಸ್'ಗೆ ಈಗ ಹ್ಯಾಪಿಡೇಸ್. ಈ ಸಂತೋಷಕ್ಕೆ ಕಾರಣ ಉದ್ಯಮದಿಂದ ಚಿತ್ರಕ್ಕೆ ಬಿಡುಗಡೆಗೆ ಪೂರ್ವದಲ್ಲೇ ಸಿಗುತ್ತಿರುವ ಪ್ರಶಂಸೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ವೀಕ್ಷಿಸಿದ ಕೆಲವು ಗಣ್ಯರು ವಿತರಣೆಗೆ ನಾ ಮುಂದು ತಾ ಮುಂದು ಎಂದು ಬರುತ್ತಿದ್ದಾರೆ. ಈ ಸುದ್ದಿ ತಿಳಿದ ನಿರ್ಮಾಪಕರು ಆನಂದಸಾಗರದಲ್ಲಿ ಮುಳುಗಿದ್ದಾರೆ. ಫ್ರೆಂಡ್ಸ್, ಚೆಲ್ಲಾಟ ಹಾಗೂ ಕೃಷ್ಣದಂತಹ ಯಶಸ್ವಿ ಚಿತ್ರಗಳ ನಂತರ 'ಜಾಲಿಡೇಸ್' ಚಿತ್ರವನ್ನು ನಿರ್ದೇಶಿಸುತ್ತಿರುವ ಎಂ.ಡಿ.ಶ್ರೀಧರ್ ಮಂಜರಿ ಸ್ಟೂಡಿಯೋದಲ್ಲಿ ಸ್ಪೆಷಲ್ ಎಫೆಕ್ಟ್ ಪ್ರಕ್ರಿಯೆಯನ್ನು ಪೂರ್ಣಗೊಳ್ಳಿಸಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಚಿತ್ರಕ್ಕೆ ಮಿಕ್ಕಿ ಜೆ ಮಯೂರ್ ಸಂಗೀತ ಸಂಯೋಜಿಸಿದ್ದಾರೆ.

ಪಿ.ಆರ್.ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಬಿ.ಎ.ಮಧು ಸಂಭಾಷಣೆ, ಕವಿರಾಜ್ ಗೀತರಚನೆ, ಫೈವ್ ಸ್ಟಾರ್‌ಗಣೇಶ್, ತ್ರಿಭುವನ್, ಇಮ್ರಾನ್ ನೃತ್ಯ, ರಂಗಸ್ವಾಮಿ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ದೀಪು, ವಿಶ್ವಾಸ್, ಪ್ರವೀಣ್, ನಿರಂಜನ್, ಐಶ್ವರ್ಯನಾಗ್, ಋತ್ವ, ಸ್ಪೂರ್ತಿ, ಕೀರ್ತಿ, ಶ್ರೀರಾಘವ್, ಸುಚೀಂದ್ರ ಪ್ರಸಾದ್, ಕಿಶೋರಿ ಬಲ್ಲಾಳ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada