»   » ಗೋವಿಂದಾಯ ನಮಃ ದಲ್ಲಿ ವೇಶ್ಯೆಯಾಗಿರುವ ರೇಖಾ

ಗೋವಿಂದಾಯ ನಮಃ ದಲ್ಲಿ ವೇಶ್ಯೆಯಾಗಿರುವ ರೇಖಾ

Posted By:
Subscribe to Filmibeat Kannada

ಗೋವಿಂದಾಯ ನಮಃ ಚಿತ್ರದಲ್ಲಿ ರಹಸ್ಯವೊಂದಿದೆ ಎಂಬ ಸುದ್ದಿ ಬಂದಿದೆ...ಅದು ನಟಿ ರೇಖಾ (ಜಿಂಕೆಮರಿ) ಈ ಚಿತ್ರದಲ್ಲಿ ವೇಶ್ಯೆಯ ಪಾತ್ರ ಮಾಡಿದ್ದಾರೆ ಎಂಬುದು. ಇತ್ತೀಚಿಗೆ ಕನ್ನಡದಿಂದ ಮರೆಯಾಗಿದ್ದ ರೇಖಾ, ಮತ್ತೆ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಅದೂ ವೇಶ್ಯೆಯ ಪಾತ್ರದ ಮೂಲಕ ಎನ್ನಲಾಗಿದೆ.

ಚಿತ್ರದಲ್ಲಿ ಆ ಪಾತ್ರ ನಿಜವಾಗಿಯೂ ತುಂಬಾ ಸತ್ವಯುತವಾಗಿದೆಯಂತೆ. ಚಿತ್ರ ನೋಡನೋಡುತ್ತಾ ಮನಸ್ಸು ತುಂಬಿಕೊಳ್ಳುವ ಆ ಪಾತ್ರ, ಪ್ರೇಕ್ಷಕರ ಅರಿವನ್ನು ಮೀರಿ ಚಪ್ಪಾಳೆ ಗಿಟ್ಟಿಸಲಿದೆಯಂತೆ. ಮಾಡಿದರೆ ಇಂಥಾ ಪಾತ್ರವನ್ನು ಮಾಡಬೇಕೆಂದು ರೇಖಾ ಕಡೆ ಅಭಿಮಾನದಿಂದ ನೋಡುವಂತೆ ಮಾಡಿದ್ದಾರಂತೆ ರೇಖಾ.

ಪ್ಯಾರ್ ಗೆ ಆಗ್ಬುಟ್ಟೈತೆ ಹಾಡಂತೂ ಯೂ ಟ್ಯೂಬ್ ನಲ್ಲಿ ಕನ್ನಡದ ಕೊಲವೆರಿ ಎನ್ನುವಷ್ಟೇ ಜನಪ್ರಿಯವಾಗಿದೆ. ಅದೊಂದೇ ಹಾಡು ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಕೊಳ್ಳುವಂತೆ ಮಾಡಿವೆ. ಇದೇ ವೇಳೆ ಜಿಂಕೆಕಣ್ಣುಗಳ ಜಿಂಕೆಮರಿ ರೇಖಾ, ವೇಶ್ಯೆಯ(?) ಪಾತ್ರದ ಮೂಲಕ ಜನಮನವನ್ನು ತುಂಬಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಗೋವಿಂದಾಯ ನಮಃ ರೇಖಾಗೆ ಮತ್ತೆ ಕನ್ನಡದಲ್ಲಿ ಅವಕಾಶಗಳ ಮಳೆ ಸುರಿಸುವುದು ಖಂಡಿತ ಎನ್ನಲಾಗುತ್ತಿದೆ.

ಇಂದು ಬಿಡುಗಡೆಯಾಗಿ ಮೊದಲ ಪ್ರದರ್ಶನ ಕಾಣುತ್ತಿರುವ ಗೋವಿಂದಾಯ ನಮಃ ಚಿತ್ರವು ನಿರೀಕ್ಷೆಗೂ ಮೀರಿ ಜನರನ್ನು ಚಿತ್ರಮಂದಿರಕ್ಕೆ ಕರೆತಂದಿದೆ, ಮೊದಲ ಶೋಗೆ ಎಲ್ಲಾ ಕಡೆ ಚಿತ್ರಮಂದಿರ ಭರ್ತಿಯಾಗಿದೆ ಎಂಬ ಸುದ್ದಿ ನಮ್ಮ ವರದಿಗಾರರಿಂದ ಬಂದಿದೆ. ಶೀಘ್ರದಲ್ಲೇ ಚಿತ್ರವಿಮರ್ಶೆ ನಿರೀಕ್ಷಿಸಿ.... (ಒನ್ ಇಂಡಿಯಾ ಕನ್ನಡ)

English summary
There is news that Actress Rekha's Role in the movie 'Govindaya Namaha' is memorable.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X