ಗ್ರೋವರ್ ಕೊಲೆ ಪ್ರಕರಣ: ಮೈಸೂರು ನಟಿ ಮಾರಿಯಾ ದೋಷಿ

By Rajendra

Actress Maria Susairaj
ಟಿವಿ ಕಾರ್ಯನಿರ್ವಹಣಾಧಿಕಾರಿ ನೀರಜ್ ಗ್ರೋವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಕನ್ನಡ ನಟಿ ಮಾರಿಯಾ ಸುಸೈರಾಜ್ ಹಾಗೂ ಆಕೆಯ ಬಾಯ್‌ಫ್ರೆಂಡ್ ಕಮ್ ಮಾಜಿ ನೌಕಾದಳದ ಅಧಿಕಾರಿ ಎಮಿಲ್ ಜೆರೋಮ್ ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ಗ್ರೋವರ್ ಕೊಲೆಗೆ ಕಾರಣವಾದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದಸಂಬಂಧ ಭಾರತೀಯ ದಂಡ ಸಂಹಿತೆ 201ರಡಿ ಮಾರಿಯಾರನ್ನು ಹಾಗೂ ಕೊಲೆಗೆ ಸಹಕರಿಸಿದ ಕಾರಣ ಸೆಕ್ಷನ್ 304 (ಭಾಗ 1)ರಡಿ ದೋಷಿ ಎಂದು ನಿರ್ಧರಿಸಿದೆ. ಆದರೆ ಜೆರೋಮ್ ಕೊಲೆ ಕಾರಣ ಏನು ಎಂಬುದನ್ನು ಸಾಬೀತುಪಡಿದಲು ಪ್ರಾಸಿಕ್ಯೂಷನ್ ವಿಫಲವಾಯಿತು.

"ಕೊಲೆಗೆ ಕಾರಣ ಏನು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಆಗಲಿಲ್ಲ" ಎಂದು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಡಬ್ಲ್ಯು ಚಂಡ್‌ವನಿ ಹೇಳಿದರು. ಶಿಕ್ಷಯ ಪ್ರಮಾಣವನ್ನು ಶುಕ್ರವಾರ (ಆ.1) ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದರೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಕೋರ್ಟ್ ತೀರ್ಪಿನ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ವಿ ಕಿಣಿ ಹಾಗೂ ಗ್ರೋವರ್ ಸಂಬಂಧಿಗಳು ತೀರ್ಪನ್ನು ಪ್ರಶ್ನಿಸಲು ನಿರ್ಧರಿಸಿದ್ದಾರೆ. ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂಬುದು ಅವರ ವಾದ.

"ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಾಗಿದೆ. ಹೆಚ್ಚು ಎಂದರೆ ಅವರಿಗೆ ಮೂರು ವರ್ಷ ಕಾರಾಗಾರ ಶಿಕ್ಷೆ ವಿಧಿಸಬಹುದು. ತೀರ್ಪಿನ ವಿರುದ್ಧ ನಾವು ಹೆಚ್ಚುವರಿ ನ್ಯಾಯಾಲಯದ ಮೊರೆಹೋಗುತ್ತೇವೆ. ಶಿಕ್ಷೆಯ ಪ್ರಮಾಣ ಶುಕ್ರವಾರ ಪ್ರಕಟವಾಗಲಿದೆ" ಎಂದಿದ್ದಾರೆ ಕಿಣಿ.

"ನ್ಯಾಯಾಂಗದ ಮೇಲೆ ನಾನು ನಂಬಿಕೆ ಕಳೆದುಕೊಂಡಿದ್ದೇನೆ. ತೀರಾ ನಿರಾಶಾದಾಯ ತೀರ್ಪು ನೀಡಿದ್ದಾರೆ. ಮಾರಿಯಾ ಅವನನ್ನು ಕೊಲೆ ಮಾಡಿಲ್ಲ ಎಂದಾದರೆ ನನ್ನ ಮಗ ಎಲ್ಲಿ?" ಎಂದು ಹತಾಶರಾಗಿ ನುಡಿದ್ದಾರೆ ಗ್ರೋವರ್ ಅವರ ತಂದೆ ಅಮರನಾಥ್ ಗ್ರೋವರ್.

ಏನಿದು ಗ್ರೋವರ್ ಕೊಲೆ ಪ್ರಕರಣ?: 2008ರಲ್ಲಿ ಮಾರಿಯಾ ಸುಸೈರಾಜ್ ತಂಗಿದ್ದ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಭಾವಿ ಪತಿ ಜೆರೋಮ್ ಜೊತೆ ಸೇರಿ ನೀರಜ್ ಗ್ರೋವರ್‌ನನ್ನು ಹತ್ಯೆ ಮಾಡಿದ್ದಳು. ಬಳಿಕ ಶವವನ್ನು ಬಿಸಾಡಿ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದ್ದಳು.

ಪೊಲೀಸರ ಪ್ರಯತ್ನದಿಂದ ಈ ಕೊಲೆ ಪ್ರಕರಣ ಬಯಲಾಗಿತ್ತು. ಬಳಿಕ ಮಾರಿಯಾ ಹಾಗೂ ಜೆರೋಮ್‌ನನ್ನು ಬಂಧಿಸಲಾಗಿತ್ತು. ತ್ರಿಕೋನ ಪ್ರೇಮವೆ ಕೊಲೆಗೆ ಕಾರಣ ಎನ್ನಲಾಗಿದೆ. ಗ್ರೋವರ್ ಮೃತದೇಹವನ್ನು ಚಾಕುವಿನಿಂದ ಕತ್ತರಿಸಿ ಚಿದ್ರಚಿದ್ರ ಮಾಡಲಾಗಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Maria Susairaj along with her boyfriend and former naval officer Emile Jerome have been convicted in the brutal murder of Neeraj Grover, a senior TV executive, by a Mumbai sessions court on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X