ಪ್ರಿಯಾಂಕಾ ಗೌರಿ-ಗಣೇಶ ಹಬ್ಬದ ಆಚರಣೆ ಫಸ್ಟ್ ಕ್ಲಾಸ್

ಅಮ್ಮನೊಟ್ಟಿಗೆ ಮಡಿಯಲ್ಲಿ ಗೌರಿ-ಗಣೇಶನಿಗಾಗಿ ನೈವೇದ್ಯಕ್ಕೆ ರೆಡಿ ಮಾಡುತ್ತೇವೆ. ಒಬ್ಬಟ್ಟು, ಕಡಬು ಇದ್ದೇ ಇರುತ್ತದೆ. ಜೊತೆಗೆ ಹೋಳಿಗೆ, ಸಿಹಿತಂಡಿಗಳು, ಹಣ್ಣುಗಳು. ಊಟದ ಐಟಮ್ ಗಳಂತೂ ಮಾಮೂಲಿ.
ಮಧ್ಯಾಹ್ನವಾಗುತ್ತಲೇ ಪೂಜೆ ಮುಗಿದು ಊಟದ ಸಂಭ್ರಮ. ನಾನ್ಯಾವತ್ತೂ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವುದರಿಂದ ಮನೆಯವರೊಟ್ಟಿಗೆ ಇರುವುದು ಕಡಿಮೆಯೇ. ಹಾಗಾಗಿ ನನಗೂ, ಮನೆಯವರಿಗೂ ಹಬ್ಬದ ಈ ದಿನ ಡಬಲ್ ಖುಷಿ.
ಊಟ ಮುಗಿಸಿ ಫ್ರೆಂಡ್ಸ್, ರಿಲೇಟಿವ್ಸ್ ಮನೆಗಳಿಗೆ ಹೋಗುತ್ತೇವೆ. ಅಲ್ಲಿ ಗಣೇಶನ್ನು ನೋಡುವುದಕ್ಕಿಂತ ಅವರು ಹೇಗೆ ಡಿಫ್ರೆಂಟಾಗಿ ಅಲಂಕಾರ ಮಾಡಿದ್ದಾರೆ ಎನ್ನುವುದನ್ನು ನೋಡುವ ಕುತೂಹಲವೇ ಜಾಸ್ತಿ! ಅದನ್ನೆಲ್ಲ ಮುಂದಿನ ವರುಷ ನಾವೂ ಅನುಸರಿಸಬಹುದಲ್ಲ ಎಂಬ ದೂರಾಲೋಚನೆ.
ಅವರೂ ನಮ್ಮ ಮನೆಗಳಿಗೆ ಬರುತ್ತಾರೆ. ಅರಿಶಿನ-ಕುಂಕುಮ, ಹೂವು-ಹಣ್ಣು ಕೊಟ್ಟು ಅವರನ್ನು ಸತ್ಕರಿಸುತ್ತೇವೆ. ನಂಗಂತೂ ಗಣೇಶನ ಹಬ್ಬ ಅಂದ್ರೆ ಎಲ್ಲ ಹಬ್ಬಕ್ಕಿಂತ ಖುಷಿ, ಭಕ್ತಿ. ನಮ್ಮನೆಯಲ್ಲೂ ಎಲ್ಲರಿಗೂ ಸಡಗರ-ಸಂಭ್ರಮ.
ನಾಡಿನ ಎಲ್ಲ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು..." ಇಷ್ಟು ಹೇಳಿ ಖುಷಿಯಿಂದ ಎದ್ದರು ಪ್ರಿಯಾಂಕಾ ಚಂದ್ರ. ಅವರಿಗೆ ಹಾಗೂ ಅವರ ಮನೆಯವರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.


Click it and Unblock the Notifications











