ಕಳ್ಳರನ್ನು ಜಗ್ಗೇಶ್ ಚೇಸ್ ಮಾಡಿದ್ದು ಹೇಗೆ ಗೊತ್ತಾ

By Rajendra
<ul id="pagination-digg"><li class="previous"><a href="/news/30-jaggesh-real-bodyguard-catching-chain-snatchers-aid0052.html">« Previous</a>

ಈ ಸಂದರ್ಭದಲ್ಲಿ ಅಲ್ಲೇ ಇದ್ದ ನಟ ಜಗ್ಗೇಶ್ ಹಾಗೂ ಅವರ ಕಾರು ಚಾಲಕ ಪದ್ಮನಾಭ ಅವರು ಬೈಕಿನಲ್ಲಿ ಸರಗಳ್ಳರ ಬೆನ್ನತ್ತಿದ್ದಾರೆ. ಬಳಿಕ ಸರಗಳ್ಳರನ್ನು ಹಿಡಿಯುವಲ್ಲಿ ಜಗ್ಗೇಶ್ ಹಾಗೂ ಯುವಕರು ಯಶಸ್ವಿಯಾಗಿದ್ದಾರೆ. ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಜಗ್ಗೇಶ್ ಏನು ಹೇಳಿದರೆಂದರೆ ಅವರ ಮಾತಿನಲ್ಲೇ ಕೇಳಿರಿ. ಓವರ್ ಟು ಜಗ್ಗೇಶ್...

ಬಾಡಿಗಾರ್ಡ್ ಚಿತ್ರದ ಪ್ರೀಮಿಯರ್ ಶೋವನ್ನು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಾನು ಮತ್ತು ನಮ್ಮ ಡ್ರೈವರ್ ಹೊರಗೆ ನಿಂತಿದ್ದೆವು. ಇಬ್ಬರು ಯುವಕರು ಯುವತಿಯೊಬ್ಬಳನ್ನು ಜಡೆ ಹಿಡಿದು ಎಳೆದುಕೊಂಡು ಹೋಗುತ್ತಿದ್ದನ್ನು ನೋಡಿದೆವು. ರಸ್ತೆಯಲ್ಲಿ ಹೋಗುತ್ತಿದ್ದವರೊಬ್ಬರ ಬೈಕನ್ನು ಪಡೆದು ದುಷ್ಕರ್ಮಿಗಳ ಬೆನ್ನತ್ತಿದೆವು.

ಕಿಡಿಗೇಡಿಗಳು ಸಣ್ಣ ಪುಟ್ಟ ರಸ್ತೆಗಳೆಲ್ಲೆಲ್ಲಾ ನುಗ್ಗುತ್ತಾ ಎಕ್ಸೇಫ್ ಆಗಲು ಪ್ರಯತ್ನಿಸುತ್ತಿದ್ದರು. ಆದರೂ ನಾವು ಅವರನ್ನು ಹಿಂಬಾಲಿಸುತ್ತಲೇ ಹೋದೆವು. ಕ್ಯೂನಿ ಕಾನ್ವಂಟ್ ಬಳಿ ಕಾರೊಂದು ಅಡ್ಡಬಂದ ಕಾರಣ ಕಿಡಿಗೇಡಿಗಳು ತಮ್ಮ ಬೈಕನ್ನು ನಿಲ್ಲಿಸಿದರು. ನಾವು ಹಿಂದಿನಿಂದ ಅವರ ಬೈಕಿಗೆ ಡಿಕ್ಕಿ ಹೊಡೆದು ಕೆಳಗುರುಳಿಸಿದೆವು. ಬಳಿಕ ಇಬ್ಬರನ್ನು ಹಿಡಿದುಕೊಂಡೆವು.

ಸ್ನೇಹಿತರಿಗೆ ಪಾರ್ಟಿ ಕೊಡಿಸಲು ಈ ಕೆಲಸ ಮಾಡಿದ್ದಾಗಿ ಸರಗಳ್ಳಲು ತಿಳಿಸಿದ್ದು, ತಮ್ಮನ್ನು ಪೊಲೀಸರಿಗೆ ಒಪ್ಪಿಸದೆ ಬಿಟ್ಟುಬಿಡುವಂತೆ ಅಂಗಲಾಚಿ ಬೇಡಿಕೊಂಡರು. ಯುವಕರು ಹಣಕ್ಕಾಗಿ ಈ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ವಿಷಾದನೀಯ. ತಂದೆತಾಯಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದಿದ್ದಾರೆ ಜಗ್ಗೇಶ್. ಯುವತಿಯರ ಪಾಲಿಗೆ ನಿಜಜೀವನದಲ್ಲೂ ಜಗ್ಗೇಶ್ ಬಾಡಿಗಾರ್ಡ್ ಆಗಿದ್ದಕ್ಕೆ ಥ್ಯಾಂಕ್ಸ್ ಹೇಳಲೇಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)

<ul id="pagination-digg"><li class="previous"><a href="/news/30-jaggesh-real-bodyguard-catching-chain-snatchers-aid0052.html">« Previous</a>

More from Filmibeat

English summary
How actor Jaggesh chase the chain snatchers? The chain snatcher pulled Shruthi by her and escaped, when she tried to protest them. Few college students chased them. Meanwhile, Jaggesh, who witnessed the scene, also chased them in a filmy way. Finally, the comedian caught and handed over the chain snatcher to the police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X