ಸಿನಿಮೀಯ ರೀತಿಯಲ್ಲಿ ಸರಗಳ್ಳರ ಹಿಡಿದ ನಟ ಜಗ್ಗೇಶ್

By Rajendra
<ul id="pagination-digg"><li class="next"><a href="/news/30-how-actor-jaggesh-chase-the-chain-snatchers-aid0052.html">Next »</a></li></ul>

ಇದು ಯಾವುದೋ ಚಿತ್ರವೊಂದರ ಚಿತ್ರೀಕರಣವಲ್ಲ. ರೀಲ್ ಸ್ಟೋರಿಯಂತೂ ಅಲ್ಲವೇ ಅಲ್ಲ. ಬೆಂಗಳೂರು ಮಲ್ಲೇಶ್ವರಂನಲ್ಲಿ ನಡೆದ ರಿಯಲ್ ಕತೆ. ಯುವತಿಯೊಬ್ಬಳ ಸರ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಸರಗಳ್ಳರನ್ನು ನವರಸನಾಯಕ ನಟ ಜಗ್ಗೇಶ್ ಮತ್ತು ಯುವಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಗುರುವಾರ (ಸೆ.29) ನಡೆದಿದೆ. ಬಂಧಿತರು ಶೇಷಾದ್ರಿಪುರಂ ಹಾಗೂ ಆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಇವರು ಹದಿನೆಂಟು ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವಗಳು ಹೀಗಿವೆ.

ಸಮಯ ಸಂಜೆ ಆರು ಗಂಟೆ. ಮಲ್ಲೇಶ್ವರಂ ಹನ್ನೊಂದನೆ ಅಡ್ದರಸ್ತೆಯಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಆಗಷ್ಟೆ ಕಾಲೇಜು ಮುಗಿಸುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಶ್ರುತಿ ಸರವನ್ನು ಕೈಯಲ್ಲಿ ಹಿಡಿದು ಕೆಳಗೆ ಕುಳಿತುಕೊಂಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಶ್ರುತಿಯ ಜಡೆ ಇಳಿದುಕೊಂಡು ಧರಧರನೆ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾರೆ. ಆದರೂ ಶ್ರುತಿ ಸರವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸರ ಕಿತ್ತುಕೊಳ್ಳಲು ವಿಫಲರಾದ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಅಲ್ಲೇ ಇದ್ದ ಸ್ಥಳೀಯ ಯುವಕರು ಬೈಕಿನಲ್ಲಿ ದುಷ್ಕರ್ಮಿಗಳ ಬೆನ್ನತ್ತಿದ್ದಾರೆ. ಮುಂದೆ ಓದಿ ಜಗ್ಗೇಶ್ ಕಳ್ಳರ ಬೆನ್ನತ್ತಿದ್ದು ಹೇಗೆಂಬುದನ್ನು...

<ul id="pagination-digg"><li class="next"><a href="/news/30-how-actor-jaggesh-chase-the-chain-snatchers-aid0052.html">Next »</a></li></ul>

More from Filmibeat

English summary
Kannada actor Jaggesh, who chases villains to save heroines in films, has proved that he is real bodyguard of women by nabbing a real-life chain snatchers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X