»   » ಪಿಯುಸಿ ಚಿತ್ರ ತೆರೆಗೆ ಬರಲು ಸಿದ್ಧ

ಪಿಯುಸಿ ಚಿತ್ರ ತೆರೆಗೆ ಬರಲು ಸಿದ್ಧ

Posted By:
Subscribe to Filmibeat Kannada

ಕಾಲೇಜು ಮೋಜಿನ ಮೆಟ್ಟಿಲಲ್ಲ. ಸರಸ್ವತಿಯ ದೇಗುಲ ಎಂದು ತಿಳಿದು ವಿದ್ಯೆಗೆ ಪ್ರಾಧಾನ್ಯ ನೀಡಿ ವಿದ್ಯಾವಂತರಾಗುವ ಹುಡುಗರ ಹಾಗೂ ವಿದ್ಯಾವಂತರಾಗಿದ್ದರೂ ಪ್ರೀತಿಯ ಬಲೆಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳ ವಿಚಾರವನ್ನು ಚಿತ್ರದ ಕಥಾಹಂದರವಾಗಿಸಿ ತೆರೆಯ ಮೇಲೆ ತರುತ್ತಿದ್ದಾರೆ

ನಿರ್ದೇಶಕದ್ವಯರಾದ ಎಸ್.ಆರ್.ಬ್ರದರ್ಸ್. ತಂಡ ಅಪಾರಶ್ರಮವಹಿಸಿ ಪಿ.ಯು.ಸಿ ಪರೀಕ್ಷೆ ಬರೆದಿದ್ದು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವನ್ನು ವೀಕ್ಷಿಸಿ ಫಲಿತಾಂಶ ನೀಡಬೇಕಾದವರು ಮಹಾಜನತೆ ಎನ್ನುತ್ತಾರೆ ನಿರ್ಮಾಪಕರು. ಹಂಸಲೇಖಾರ ಶಿಷ್ಯ ರವಿರಾಜ್ ಪ್ರಥಮ ಸಂಗೀತ ನಿರ್ದೇಶನದಲ್ಲೇ ಕೇಳುಗರ ಮನಗೆದಿದ್ದಾರೆ. ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಜನಪ್ರಿಯವಾಗಿದೆ.

ಅಭಯಜ್ಯೋತಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣೇಗೌಡ ಬಿ ಪಾಟೀಲ್ ನಿರ್ಮಿಸಿ, ಎಸ್.ಆರ್.ಬ್ರದರ್ಸ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ಪಿ ಯು ಸಿ ಕನಸಿನ ಖಜಾನೆ. ರವಿರಾಜ್ ಸಂಗೀತ, ಸುರೇಶ್‌ಬಾಬು ಛಾಯಾಗ್ರಹಣ, ಪ್ರಕಾಶ್ ಸಂಕಲನ, ಮದನ್‌ಹರಿಣಿ, ಚಿನ್ನಿಪ್ರಕಾಶ್ ನೃತ್ಯ, ರವಿವರ್ಮ ಸಾಹಸ, ಸೋಮನಾಥ್ ಸಹನಿರ್ದೇಶನ, ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್‌ಚಂದ್ರ, ಹರ್ಷಿಕಾಪೂರ್ಣಚ್ಚ, ಚರಿಷ್ಮಾ, ಅವಿನಾಶ್, ವಿನಯಾಪ್ರಕಾಶ್, ರಾಮಕೃಷ್ಣ, ಸಾಧುಕೋಕಿಲಾ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada