ರಾಜ್ಯದಲ್ಲಿ ರಜನಿಕಾಂತ್ ಎಂಧಿರನ್‌ಗೆ ಹಿನ್ನಡೆ
ರಾಜ್ಯದಾದ್ಯಂತ 35 ಚಿತ್ರಮಂದಿರಗಳಲ್ಲಿ 'ಎಂಧಿರನ್' ಚಿತ್ರ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಬುಧವಾರ (ಸೆ.29)ಗ್ರೀನ್ ಸಿಗ್ನಲ್ ನೀಡಿತ್ತು. ಫಿಲಂ ಚೇಂಬರ್‌ನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಎಂಧಿರನ್' ಚಿತ್ರವನ್ನು 25 ಚಿತ್ರಮಂದಿರಗಳಿಗೆ ಸೀಮಿತಗೊಳಿಸಿದೆ.
ವಾಣಿಜ್ಯ ಮಂಡಳಿ ನಿಯಮದಂತೆ ಪರಭಾಷಾ ಚಿತ್ರಗಳು 25 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಬೇಕು. ಈ ನಿಯಮದಂತೆಯೇ 'ಎಂಧಿರನ್' ಸಹ 25 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ. ಈ ಮೂಲಕ 'ಎಂಧಿರನ್' ಬಿಡುಗಡೆಗೆ ಸಂಬಂಧಿಸಿದಂತೆ ತಲೆಯೆತ್ತಿದ್ದ ವಿವಾದ ಅಂತ್ಯಗೊಂಡಿದೆ.
ಟಿಕೆಟ್ ಬೆಲೆಯನ್ನು ಹೆಚ್ಚಿಸದೆ, ಮೂಲ ಬೆಲೆಗೆ ಮಾರಾಟ ಮಾಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ರು.75 ಬೆಲೆಯ ಟಿಕೆಟ್‌ಗಳು ರು.1000ಕ್ಕೆ ಮಾರಾಟವಾಗಿದ್ದು, ಮಲ್ಟಿಫೆಕ್ಸ್ ಗಳಲ್ಲಿ ರು.1000 ಟಿಕೆಟ್ ದರ ರು.3000ಕ್ಕೆ ಮಾರಾಟವಾಗಿವೆ ಎಂಬ ಆರೋಪವೂ ಇದೆ. ಆದರೆ ಈ ಬಗ್ಗೆ ವಾಣಿಜ್ಯ ಮಂಡಳಿ ಯಾವುದೇ ಚರ್ಚೆ ಮಾಡದೆ ಮೌನ ವಹಿಸಿತು.


Click it and Unblock the Notifications











