ಹ್ಯಾಟ್ರಿಕ್ ಹೀರೋ ಜೊತೆ ನಟಿಸಲು ಮೆಗಾ ಸ್ಟಾರ್ ಆಸಕ್ತಿ
ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಹಾಗೂ ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಕನ್ನಡದ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದರು. ಒಂದು ರವಿಚಂದ್ರನ್ ಜತೆ 'ಸಿಪಾಯಿ' ಚಿತ್ರದಲ್ಲಿ ಹಾಗೂ ಮತ್ತೊಂದು ಭಕ್ತಿಪ್ರಧಾನ ಚಿತ್ರ 'ಶ್ರೀಮಂಜುನಾಥ'.
ಶುಕ್ರವಾರ ಅವರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯನ್ನ್ನು ತಿಳಿಸಿದರು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ನಾರಾಯಣ ನೇತ್ರಾಯಲಕ್ಕೆ ಬರಲು ಕಾರಣರಾಗಿದ್ದು ಚಿತ್ರದುರ್ಗದ ಆರು ವರ್ಷದ ಪುಟ್ಟ ಬಾಲಕಿ ರಾಧಾ.
ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರ ಮಗು ರಾಧಾ ಆಕಸ್ಮಿಕವಾಗಿ ದೃಷ್ಟಿ ಕಳೆದುಕೊಂಡಿದ್ದರು. ಈಕೆಗೆ ನಾರಾಯಣ ನೇತ್ರಾಲಯದಲ್ಲಿ ಮತ್ತೊಬ್ಬರ ಕಣ್ಣುಗಳನ್ನು ಹಸ್ತಾಂತರಿಸಿ ದೃಷ್ಟಿ ಕರುಣಿಸಲಾಯಿತು. ದೃಷ್ಟಿ ಬರುವುದಕ್ಕೂ ಮುನ್ನ ಈ ಪುಟ್ಟ ಬಾಲಕಿಗೆ ಒಂದು ಆಸೆಯೂ ಇತ್ತು. ಚಿರಂಜೀವಿ ಮತ್ತು ನಟ ಶಿವರಾಜ್ ಕುಮಾರ್ ಅವರನ್ನು ಕಣ್ಣಾರೆ ನೋಡಬೇಕೆಂದು.
ಅಭಿಮಾನಿಯ ಕರೆಗೆ ಓಗೊಟ್ಟು ನಟ ಚಿರಂಜೀವಿ ಬೆಂಗಳೂರಿಗೆ ಆಗಮಿಸಿದ್ದರು. ಜೊತೆಗೆ ಶಿವಣ್ಣ ಸಹ ಬಂದಿದ್ದರು. ತಮ್ಮ ಕಣ್ಣೆದುರಿಗೆ ಬಂದು ನಿಂತ ಚಿರಂಜೀವಿ ಮತ್ತು ಶಿವಣ್ಣನನ್ನು ಕಂಡು ರಾಧಾ ಮೂಕವಿಸ್ಮಿತರಾದರು. ಇದೇ ಸಂದರ್ಭದಲ್ಲಿ ಚಿರು ಮತ್ತು ಶಿವಣ್ಣ ನೇತ್ರದಾನ ಮಾಡುವುದಾಗಿ ಒಡಂಬಡಿಕೆ ಪತ್ರಕ್ಕೆ ಸಹಿಹಾಕಿದರು.
ಚಿರಂಜೀವಿ ಮಾತನಾಡುತ್ತಾ, ಶಿವರಾಜ್ ಕುಮಾರ್ ನನ್ನ ಆತ್ಮೀಯ ಗೆಳೆಯ. ಅವರೊಂದಿಗೆ ನಟಿಸಬೇಕೆಂದಿದ್ದೇನೆ ಎಂದು ಹೇಳಿದ್ದಾರೆ. ರಾಜ್ ಅವರ ದೊಡ್ಡ ಅಭಿಮಾನಿ ನಾನು. ತಾನು ಅಭಿಮಾನಿಸುವ ರಾಜ್ ಕುಮಾರ್ ಅವರು ನೇತ್ರದಾನ ಮಾಡಿರುವ ಆಸ್ಪತ್ರೆಯಲ್ಲಿ ತಾನು ನೇತ್ರದಾನ ಪತ್ರಕ್ಕೆ ಸಹಿಹಾಕುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರು.


Click it and Unblock the Notifications











