For Quick Alerts
  ALLOW NOTIFICATIONS  
  For Daily Alerts

  ಇನ್ನು ವೆಬ್ ಸೈಟ್ ನಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು

  By Staff
  |
  ನಮ್ಮಲ್ಲಿಖ್ಯಾತ ನಿರ್ದೇಶಕರ ಪ್ರಶಸ್ತಿ ವಿಜೇತ ಚಿತ್ರಗಳನ್ನು ನೋಡಬೇಕು ಎಂದು ಹಂಬಲಿಸುವವರಿಗೇನು ಬರವಿಲ್ಲ. ಆದರೆ ಅವು ನೋಡಲು ಸಿಗುವುದಾದರೂ ಎಲ್ಲಿ? ಈ ಪ್ರಶ್ನೆಗೆ ಉತ್ತರವೂ ಅಷ್ಟೇ ನಿರಾಶಾದಾಯಕವಾಗಿದೆ.

  ಒಂದು ವೇಳೆ ಮಾರುಕಟ್ಟೆಯಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳ ಸಿಡಿ ಸಿಕ್ಕಿದರೂ ಗುಣಮಟ್ಟ ಕೇಳುವಂತಿಲ್ಲ. ಈ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದೇ ಕ್ಲಿಕ್ ನಲ್ಲಿ ಪರಿಹಾರ ಹುಡುಕ ಪ್ರಯತ್ನಕ್ಕೆರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ(ಎನ್ ಎಫ್ ಡಿಸಿ) ಕೈ ಹಾಕಿದೆ.

  ಆಸಕ್ತ ಚಿತ್ರ ಪ್ರೇಮಿಗಳು ವಾರ್ಷಿಕ ರು.2,500 ಹಣ ಪಾವತಿಸಿ ಚಂದಾದಾರರಾದರೆ ಪ್ರಶಸ್ತಿ ವಿಜೇತ ಚಿತ್ರಗಳ ದೃಶ್ಯ ವೈಭವವನ್ನು ಸವಿಯಬಹುದು. ಈ ಚಿತ್ರಗಳು www.nfdcindia.com ವೆಬ್ ಸೈಟಿನ ಮೂಲಕ ಬಿತ್ತರವಾಗುತ್ತವೆ. ಕಂಪ್ಯೂಟರ್ ನೊಂದಿಗೆ ಅಂತರ್ಜಾಲ ಸಂಪರ್ಕವಿದ್ದವರು ಮನೆಯಲ್ಲಿ ಕುಳಿತೇ ಈ ಚಿತ್ರಗಳನ್ನು ನೋಡಬಹುದು. ಏಪ್ರಿಲ್ 6ರಿಂದ ಈ ಸೇವೆಯನ್ನು ಎನ್ ಎಫ್ ಡಿ ಸಿಆರಂಭಿಸಲಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಇದನ್ನೂ ಓದಿ
  ದೇವರಾಯನ ದುರ್ಗದಲ್ಲಿ ಕಾಸರವಳ್ಳಿ ಚಿತ್ರಸಂವಾದ
  ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!
  ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X