ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಪೂಜಾಗಾಂಧಿ
ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿಯ ರಾಯಭಾರಿಯಾಗಿ ಚಿತ್ರನಟಿ ಪೂಜಾಗಾಂಧಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎಚ್ ಐವಿ ಮತ್ತು ಏಡ್ಸ್ ಮಹಾಮಾರಿ ಬಗ್ಗೆ ಪೂಜಾಗಾಂಧಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಎಚ್ ಐವಿ ಮತ್ತು ಏಡ್ಸ್ ಕುರಿತಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸೋಂಕಿನ ವಿವರಗಳನ್ನು ಪೂಜಾಗಾಂಧಿ ನೀಡಲಿದ್ದಾರೆ.
"ಹಲೋ ನಾನು ಪೂಜಾಗಾಂಧಿ ಮಾತನಾಡುತ್ತಿದ್ದೇನೆ...ನಿಮಗೆ ಏಡ್ಸ್ ಸೋಂಕಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡಿದ್ದೀರಾ? ಇಲ್ಲವೆ, ಹಾಗಿದ್ದರೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಏಡ್ಸ್ ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ" ಎಂದು ಪೂಜಾಗಾಂಧಿ ಹೇಳಲಿದ್ದಾರೆ. ಪೂಜಾಗಾಂಧಿ ಅವರ ಮುದ್ರಿತ ಧ್ವನಿ ಏರ್ ಟೆಲ್ ಮತ್ತು ರಿಯಲನ್ಸ್ ಮೊಬೈಲ್ ಫೋನ್ ಗಳಲ್ಲಿ ರಿಂಗಣಿಸಲಿದೆ.
ಈಗಾಗಲೆ ಲಕ್ಕಿ ಸ್ಟಾರ್ ರಮ್ಯಾ ಸೇರಿದಂತೆ ಹಲವಾರು ಮಂದಿ ಏಡ್ಸ್ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ನಾಗರಿಕರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದಾರೆ. ಸೂಪರ್ ಸ್ಟಾರ್ ಉಪೇಂದ್ರ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಸಹ ಏಡ್ಸ್ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದ್ದನ್ನು ಸ್ಮರಿಸಬಹುದು.


Click it and Unblock the Notifications











