ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಕನ್ನಡ ಚಿತ್ರ
ಚಿತ್ರದ ಹೆಸರು 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್'. ಬಹುಶ ಇದು ಯಾವುದೋ ಹಿಂದಿ ಚಿತ್ರವಿರಬೇಕು ಎಂದು ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ ಬಿಡಿ. ಚಿತ್ರದ ಹೆಸರೇ ಹಾಗಿದೆ. ಆದರೆ ಇದು ಅಪ್ಪಟ ಕನ್ನಡ ಚಿತ್ರ. ದುನಿಯಾ ಮೂಲಕ ಬೆಳಕಿಗೆ ಬಂದ ವಿಜಯ್ ಈ ಚಿತ್ರದ ನಾಯಕ.
ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೀತಂ ಗುಬ್ಬಿ. 'ಮಳೆಯಲಿ ಜೊತೆಯಲಿ' ಬಳಿಕ ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಮತ್ತೊಂದು ಲವ್ ಸ್ಟೋರಿ. ಚಿತ್ರದ ನಾಯಕ ನಟ ದುನಿಯಾ ವಿಜಯ್ ಎಂದರೆ ಆಕ್ಷನ್ ಇಲ್ಲದಿದ್ದರೆ ಹೇಗೆ? ಲವ್ ಜೊತೆಗೆ ಸ್ವಲ್ಪ ಆಕ್ಷನ್ ಸಹ ಸೇರಿಸುತ್ತಿದ್ದಾರೆ ಪ್ರೀತಂ ಗುಬ್ಬಿ.
ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಜಯಣ್ಣ ನಿರ್ಮಿಸುತ್ತಿರುವ ಈ ಚಿತ್ರದಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಸದ್ಯಕ್ಕೆ ವಿಜಿ ನಟಿಸುತ್ತಿರುವ 'ಕಂಠೀರವ' ಮತ್ತು 'ವೀರಬಾಹು' ಚಿತ್ರಗಳ ಚಿತ್ರೀಕರಣ ಮುಗಿದಿದೆ.
ದುನಿಯಾ ವಿಜಯ್ ಪ್ರೀತಂ ಗುಬ್ಬಿ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಜಯಣ್ಣ ವಿ ಹರಿಕೃಷ್ಣ ಕಂಠೀರವ ವೀರಬಾಹು duniya vijay preetham gubbi johny mera naam preethi mera kaam


Click it and Unblock the Notifications