ಕಿಚ್ಚನ ಜೊತೆ ನಟಿಸುತ್ತಿಲ್ಲ ಪ್ಯಾಟೆ ಹುಡ್ಗಿ ಪ್ರಿಯಾಮಣಿ
ಕಿಚ್ಚ ಸುದೀಪ್ ಜೊತೆ ಅಭಿನಯಿಸುವ ಅವಕಾಶವನ್ನು ಜನಪ್ರಿಯ ತಾರೆ, ಬೆಂಗಳೂರು ಬಾಲೆ ಪ್ರಿಯಾಮಣಿ ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ! ದ್ವಾರಕೀಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೆ 'ಪ್ರೊಡಕ್ಷನ್ ನಂಬರ್ 47' ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಮಲಯಾಳಂ ನಟಿ ಭಾವನಾ ಮತ್ತೊಬ್ಬರು ಪ್ರಿಯಾಮಣಿ.
ಭಾವನಾ ಮಾತ್ರ ಕಿಚ್ಚ ಸುದೀಪ್ ಜೊತೆ ಕಾಣಿಸಲಿದ್ದಾರೆ ಆದರೆ ಪ್ರಿಯಾಮಣಿಗೆ ಆ ಅದೃಷ್ಟ ಸಿಕ್ಕಿಲ್ಲ. ಚಿತ್ರದ ಮತ್ತೊಬ್ಬ ನಾಯಕ ಸೋನು ಸೂದ್ ಜೊತೆ ಪ್ರಿಯಾಮಣಿ ಕಾಣಿಸಲಿದ್ದಾರೆ. ಕಾರಣ ಚಿತ್ರದಲ್ಲಿ ಆಕೆ ನಾಯಕಿಯಲ್ಲ. ಹಾಗಂತ ಅತಿಥಿ ಪಾತ್ರವೂ ಅಲ್ಲ. ಒಟ್ಟಿನಲ್ಲಿ ಒಂದು ಮುಖ್ಯ ಪಾತ್ರ ಎನ್ನಬಹುದು.ಚಿತ್ರದಲ್ಲಿ ಪ್ರಿಯಾಮಣಿ ಎಲ್ಲೂ ಸುದೀಪ್ ಜೊತೆ ಕಾಣಿಸುವುದಿಲ್ಲವಂತೆ.
'ರಾಮ್' ಹಾಗೂ 'ಏನೋ ಒಂಥರಾ' ಚಿತ್ರಗಳ ಬಳಿಕ ಪ್ರಿಯಾಮಣಿ ಅಭಿನಯಿಸುತ್ತಿರುವ ಮೂರನೆ ಚಿತ್ರವಿದು. ವಿ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರ ಆಗಸ್ಟ್ 5ರಂದು ಕನಕಪುರದಲ್ಲಿ ಆರಂಭವಾಗಲಿದೆ. ಸುದೀಪ್ ಚಿತ್ರದಲ್ಲಿ (ಸುದೀಪ್ ಜೊತೆ ಅಲ್ಲ)ಪ್ರಿಯಾಮಣಿ ನಟಿಸುತ್ತಿರುವುದು ಇದೇ ಮೊದಲು. ಸೋನು ಸೂದ್ ಹಾಗೂ ಪ್ರಿಯಾಮಣಿ ಭಾಗವನ್ನು ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ.


Click it and Unblock the Notifications











