ಅಣ್ಣಾ ಬಾಂಡ್ ಪುನೀತ್ ರಾಜ್‌ಕುಮಾರ್ ಸಂದರ್ಶನ

By * ಪ್ರಕಾಶ್ ಉಪಾಧ್ಯಾಯ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಣ್ಣಾಬಾಂಡ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಜಾಕಿ ಚಿತ್ರದ ನಂತರ ಮತ್ತೊಮ್ಮೆ ಪುನೀತ್ ಹಾಗೂ ದುನಿಯಾ ಸೂರಿ ಜೋಡಿಯಾಗಿರುವುದರಿಂದ ಸಹಜವಾಗಿಯೇ ಕನ್ನಡದ ಸಿನಿಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮನೆಮಾಡಿದೆ. ಅಣ್ಣಾಬಾಂಡ್ ಬಿಡುಗಡೆಯ ಹೊಸ್ತಿಲಲ್ಲಿ ( ಮೇ 1, ಮಂಗಳವಾರ) ನಿಂತಿರುವ ಸಂದರ್ಭದಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ಪುನೀತ್ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ. ಓದಿ - ಸಂಪಾದಕ.

ಜಾಕಿ ಯಶಸ್ಸಿನ ನಂತರ ಮತ್ತೆ ಸೂರಿ ನಿಮ್ಮನ್ನು ಅಣ್ಣಾಬಾಂಡ್ ದಲ್ಲಿ ನಟಿಸುವ ಬೇಡಿಕೆಯಿಟ್ಟಾಗ ಏನನ್ನಿಸಿತು?

ಜಾಕಿ ನಂತರ ಮತ್ತೆ ಸೂರಿ ಜೊತೆ ಕೆಲಸ ಮಾಡುವ ಅವಕಾಶ ಬಂದಿರುವುದು ನನ್ನ ಅದೃಷ್ಟ ಎನಿಸಿತು. ಸಾಮಾನ್ಯವಾಗಿ ಎಲ್ಲರೂ ನನ್ನ ಜೊತೆ ಕೆಲಸ ಮಾಡುವ ಅವಕಾಶ ಸೂರಿಯವರ ಅದೃಷ್ಟ ಎಂದುಕೊಂಡಿದ್ದಾರೆ. ಆದರೆ ಅದು ಉಲ್ಟಾ. ಅವರ ಜೊತೆ ಮತ್ತೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದೇ ನಾನು ಹೇಳುತ್ತೇನೆ.

ಈ ಬಾರಿ ಸೂರಿಯ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅನುಭವ ಎಕ್ಸಲೆಂಟ್. ಸೂರಿಯಂತ ಅಸಾಮಾನ್ಯ ನಿರ್ದೇಶಕರ ಜೊತೆ ಕೆಲಸ ಮಾಡುವುದು ನಿಜವಾಗಿಯೂ ಅದೃಷ್ಟದ ವಿಚಾರ. ಆ ಅನುಭವದ ಆಧಾರದ ಮೇಲೆಯೇ ನಾನೀಗ ಸೂರಿಯವರ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದಿರುವುದು.

ಅಣ್ಣಾಬಾಂಡ್ ಚಿತ್ರದಲ್ಲಿ ಏನಿದೆ? ಇದು ಹಾಲಿವುಡ್ ಬಾಂಡ್ ಚಿತ್ರಗಳ ಜೊತೆ ಏನಾದರೂ ಸಂಬಂಧ ಹೊಂದಿದೆಯಾ?

'ಬಾಂಡ್' ಎನ್ನುವ ಶಬ್ಧ ಚಿತ್ರದ ಶೀರ್ಷಿಕೆಗೆ 'ಕಿಕ್' ಕೊಡಲಿದೆ ಎಂಬ ಕಾರಣಕ್ಕೆ ಆಯ್ಕೆ ಮಾಡಿರುವುದಷ್ಟೇ. ಆ ಶಬ್ಧದಿಂದ ಟೈಟಲ್ ಆಕರ್ಷಣೆ ಹೆಚ್ಚಿದೆ. ಅದು ಬಿಟ್ಟರೆ ಹಾಲಿವುಡ್ ಬಾಂಡ್ ಚಿತ್ರಗಳಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ನನ್ನ ಮೊದಲಿನ ಸಿನಿಮಾಗಳಿಗಿಂತ ಇದು ಭಿನ್ನವಾಗಿದೆ ಎಂದಷ್ಟೆ ನಾನು ಈ ಹಂತದಲ್ಲಿ ಹೇಳಲು ಇಷ್ಟಪಡುತ್ತೇನೆ.

ಅಣ್ಣಾಬಾಂಡ್ ಚಿತ್ರದ ಹೈಲೇಟ್ ದೃಶ್ಯವೊಂದನ್ನು ಹೇಳುತ್ತೀರಾ?

ನಾನು ಈ ಚಿತ್ರಕ್ಕಾಗಿ ಮೂರರಿಂದ ನಾಲ್ಕು ತಿಂಗಳು ಕೆಲಸ ಮಾಡಿದ್ದೇನೆ. ಇದರಲ್ಲಿರುವ ಎಲ್ಲವೂ ನನಗಿಷ್ಟವಾಗಿದೆ. ಆದರೆ ಪ್ರೇಕ್ಷಕರು ಯಾವ ದೃಶ್ಯವನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಕುತೂಹಲ ಎಲ್ಲರಂತೆ ನನಗೂ ಇದೆ. ಒಂದು ಮಾತಂತೂ ಸತ್ಯ, ಅಣ್ಣಾಬಾಂಡ್ ಗೆ ಕಥೆಯೇ ಹೀರೋ.

ಈ ಚಿತ್ರದಲ್ಲಿನ ಎಂದೂ ನೀವು ಮರೆಯಲಾಗದ ಘಟನೆ?

ಬಾಲಿವುಡ್ ನಟ ಜಾಕಿಶ್ರಾಫ್ ಜೊತೆ ನಾನು ಸ್ಕ್ರೀನ್ ಹಂಚಿಕೊಂಡಿದ್ದು.

ಅಣ್ಣಾಬಾಂಡ್ ನಟಿಯರಿಬ್ಬರ ಬಗ್ಗೆ ಏನು ಹೇಳಬಯಸುತ್ತೀರಿ?

ಇಬ್ಬರೂ ಒಳ್ಳೆಯವರು, ಪ್ರತಿಭಾವಂತರು. ಪ್ರಿಯಾಮಣಿ ಜೊತೆ ಇದು ನನ್ನ ಎರಡನೇ ಚಿತ್ರ. ಆಕೆ ನನ್ನ ಒಳ್ಳೆಯ ಗೆಳತಿ ಕೂಡ. ಇನ್ನು ನಿಧಿ ಸುಬ್ಬಯ್ಯ ಜೊತೆ ನಾನು ನಟಿಸುತ್ತಿರುವುದು ಇದೇ ಮೊದಲು. ಇಬ್ಬರೂ ಸಾಕಷ್ಟು ಪರಿಶ್ರಮ, ಪ್ರತಿಭೆ ಹಾಗೂ ಎಲ್ಲವನ್ನೂ ಈ ಚಿತ್ರಕ್ಕೆ ಧಾರೆಯೆರೆದಿದ್ದಾರೆ.

ಅಣ್ಣಾಬಾಂಡ್ ಮೇಲೆ ಪ್ರೇಕ್ಷಕರು ತೀರಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಸಹಜವೆನಿಸುತ್ತದೆಯೇ ಅಥವಾ ಒತ್ತಡ ಎನಿಸುತ್ತಿದೆಯೇ?

ನನ್ನ ಎಲ್ಲಾ ಚಿತ್ರಗಳ ಬಿಡುಗಡೆ ವೇಳೆಯೂ ಸಹಜವಾಗಿ ಒತ್ತಡ ಇದ್ದೇ ಇರುತ್ತದೆ. ಆದರೆ ನಾನಿದನ್ನು ವೈಯಕ್ತಿಕವಾಗಿ ತೆಗೆದುಕೊಂಡು ನನ್ನ ತಲೆಯ ಮೇಲೆ ಆಕಾಶ ಬಿದ್ದಂತೆ ಆಡುವುದಿಲ್ಲ. ಕಷ್ಟುಪಟ್ಟು ಕೆಲಸ ಮಾಡುತ್ತೇನೆ. ನನ್ನ ಶ್ರಮ ಹಾಗೂ ಪ್ರತಿಭೆ ಮೇಲೆ ನಂಬಿಕೆಯಿಟ್ಟು ನಾನು ಈ ಅಣ್ಣಾಬಾಂಡ್ ಗೂ ಕೆಲಸ ಮಾಡಿದ್ದೇನೆ. ಇಡೀ ಟೀಮ್ ಕೂಡ ಹಾಗೇ ಮಾಡಿದೆ. ಪ್ರೇಕ್ಷಕರು ನಮ್ಮ ಅಣ್ಣಾಬಾಂಡ್ ಮೆಚ್ಚಿಕೊಳ್ಳಲಿದ್ದಾರೆ ಎಂದೇ ನಾನು ಬಲವಾಗಿ ನಂಬಿದ್ದೇನೆ.

ಅಣ್ಣಾಬಾಂಡ್ ನಂತರ ಮುಂದೇನು?

ಎಲ್ಲರಿಗೂ ತಿಳಿದಿರುವಂತೆ, ನನ್ನ ಮುಂದಿನ ಚಿತ್ರ ಪೊರಾಲಿ ರೀಮೇಕ್. ಅದೊಂದೇ ಅಲ್ಲ, ಆರ್ ಎಸ್ ಪ್ರಾಡಕ್ಷನ್ ನಿರ್ಮಾಣದಲ್ಲಿ ಇನ್ನೊಂದು ಚಿತ್ರವೂ ಬರಲಿದೆ. ಅದರ ನಿರ್ದೇಶಕರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಶೀಘ್ರದಲ್ಲೇ ಜಾಹೀರಾತು ಬರಲಿದೆ, ನಿರೀಕ್ಷಿಸಿ....

More from Filmibeat

English summary
In an exclusive interview to Oneindia Kannada Power Star Puneeth Rajkumar talks about the most awaited movie Anna Bond 24 hours before the release. Puneeth also spoke about "What next after Anna Bond". 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X