»   »  ಜೂನ್ ಮೊದಲ ವಾರದಲ್ಲಿ 'ರಾಜ್' ದಾಂಗುಡಿ!

ಜೂನ್ ಮೊದಲ ವಾರದಲ್ಲಿ 'ರಾಜ್' ದಾಂಗುಡಿ!

Subscribe to Filmibeat Kannada
Raaj The Showman to be released in June
'ರಾಜ್' ದಿ ಶೋಮ್ಯಾನ್ ಶೀರ್ಷಿಕೆಯಡಿಯಲ್ಲಿ ಪ್ರೇಮ್ ನಿರ್ದೇಶಿಸಿ ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ ಚಿತ್ರ ಜೂನ್ ಮೊದಲ ವಾರದಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.

ಚಿತ್ರದ ರೀರೆಕಾರ್ಡಿಂಗ್ ಕೆಲಸ ಇನ್ನೂ ಮುಗಿಯದೇ ಇದ್ದ ಕಾರಣ ಚಿತ್ರ ಬಿಡುಗಡೆ ಮುಂದೂಡಲಾಗಿತ್ತ್ತು. ಅಲ್ಲದೇ ನಾಯಕಿ ನಿಶಾಕೊಠಾರಿ ಅಪಘಾತಕ್ಕೆ ಈಡಾಗಿದ್ದರಿಂದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿತ್ತು. ಚಿತ್ರದ ಸಂಗೀತ ನಿರ್ದೇಶಕ ಹರಿಕೃಷ್ಣ ಎರಡು ಹಾಡುಗಳನ್ನು ಸಂಯೋಜಿಸಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಇಂತಹ ಕೆಲವು ಕಾರಣಗಳಿಂದ ಚಿತ್ರ ಮುಂದೂಡುವುದು ಅನಿವಾರ್ಯವಾಯಿತು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ವಿಳಂಬಕ್ಕೆ ಇದೂ ಒಂದು ಕಾರಣ ಎನ್ನುತ್ತಾರೆ ನಿರ್ದೇಶಕ ಪ್ರೇಮ್.

ಚಿತ್ರಕ್ಕೆ ಮೊದಲು 'ಪೋಲಿ' ಎನ್ನುವ ಹೆಸರಿಡ ಬೇಕಿತ್ತು ಆದರೆ ಪಾರ್ವತಮ್ಮ ರಾಜಕುಮಾರ್ ಹೆಸರು ಬದಲಾಯಿಸಲು ಸೂಚಿಸಿದ್ದರಿಂದ 'ರಾಜ್' ಎಂದು ಮರು ನಾಮಕರಣ ಮಾಡಲಾಯಿತು ಎಂದು ಪುನೀತ್ ಹೇಳಿದರು. ಚಿತ್ರದಲ್ಲಿನ ವಿಭಿನ್ನ ಗೆಟಪ್ ಬಹಳ ಸಂತೋಷ ನೀಡಿದೆ. ಚಿತ್ರದಲ್ಲಿನ 'ಪಾರೋ ಪಾರೋ...' ಹಾಡು ನನಗೆ ಬಹಳ ಇಷ್ಟವಾದ ಹಾಡು ಎಂದು ಪುನೀತ್ ಹೇಳಿದರು.

ಚಿತ್ರಕ್ಕೆ ಒಂದು ತಿಂಗಳ ಮುಂಚೆ ಟಿಕೆಟ್ ನೀಡಲು ಶುರು ಮಾಡುತ್ತೇವೆ ಎಂದು ಪ್ರೇಮ್ ಹೇಳಿದ್ದಾರೆ. ಚಿತ್ರದ ಧ್ವನಿಸುರುಳಿ ಈಗಾಗಲೆ ದಾಖಲೆ ಮಾರಾಟ ಕಂಡಿದೆ. ಪುನೀತ್ ಮತ್ತು ಪ್ರೇಮ್ ಅಭಿಮಾನಿಗಳು ಕಾತುರಕ್ಕೆ ಜೂನ್ ಮೊದಲ ವಾರ ತೆರೆ ಬೀಳಲಿದೆ. ಪ್ರೇಮ್ ನಿರ್ದೇಶನದ ಮತ್ತು ಶಿವರಾಜ್ ಕುಮಾರ್ ಅಭಿನಯದ 'ಜೋಗಿ' ಚಿತ್ರ ಬಿಡುಗಡೆಯ ಮಂಚೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿತ್ತು. ಅದನ್ನು ಮತ್ತೆ ಪ್ರೇಮ್ ಪುನರಾರ್ವರ್ತಿಸುತ್ತಾರೋ ಎಂದು ಕಾದು ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಾಜ್ ಬಿಡುಗಡೆ ಇಲ್ಲ
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!
ರು.3 ಕೋಟಿ ವೆಚ್ಚದಲ್ಲಿ ರಾಜ್ ಚಿತ್ರದ ಹಾಡುಗಳು!
ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada