ರಜನಿಕಾಂತ್ ಕೋಚಡಿಯಾನ್ ಗೆ ಅನುಷ್ಕಾ ಶೆಟ್ಟಿ?
ಪ್ರಾರಂಭವಾಗಲಿದೆ ರಜನಿಕಾಂತ್ ಚಿತ್ರ ಕೋಚಡಿಯಾನ್. ಅನಿಮೇಶನ್ ಟಚ್ (ತ್ರೀ ಡಿ)ನಲ್ಲಿ ರೆಡಿಯಾಗಲಿರುವ ಈ ಚಿತ್ರವನ್ನು ರಜನಿ ಮಗಳು 'ಸೌಂದರ್ಯ' ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಪ್ರಾರಂಭವಾಗಿದ್ದ ರಾಣಾ, ಮುಹೂರ್ತದ ನಂತರ ರಜನಿ ಅನಾರೋಗ್ಯದ ಕಾರಣಕ್ಕೆ ಮುಂದುವರಿದಿಲ್ಲ. ಅದೊಂದು ಐತಿಹಾಸಿಕ ಚಿತ್ರವಾದ್ದರಿಂದ ಹೆಚ್ಚು ಶ್ರಮ ಹಾಕುವ ಅನಿವಾರ್ಯತೆ ಇದೆಯಾದ್ದರಂದ ಅದನ್ನು ಈಗ ರಜನಿ ಮಾಡುತ್ತಿಲ್ಲ.
ಬದಲಿಗೆ ಈಗ ತಮ್ಮ ಮಗಳ ನಿರ್ದೇಶನದ ಕೋಚಡಿಯಾನ್ ಚಿತ್ರದಲ್ಲಿ ರಜನಿ ನಟನಾಯಾನ ಮುಂದುವರಿಯಲಿದೆ. ಈಗಾಗಲೇ ಎಂಥೀರನ್ ಮೂಲಕ ಹೊಸ ಅನುಭವವನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದ ರಜನಿಕಾಂತ್ ಈ ಹೊಸ ಚಿತ್ರದಲ್ಲಿ ಯಾವ ಹೊಸ ಕರಾಮತ್ತು ತೋರಿಸಲಿದ್ದಾರೋ!
ಈ ಚಿತ್ರ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಕಾರಣ ಸೌಂದರ್ಯ ರಜನಿಕಾಂತ್ ಅನುಷ್ಕಾರನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಅನುಷ್ಕಾ ಕೈತುಂಬಾ ಚಿತ್ರಗಳಿರುವ ನಟಿಯಾದರೂ ರಜನಿ ಸಿನಿಮಾ ಅಂದರೆ ಒಪ್ಪಿಕೊಳ್ಳಬಹುದು. ಹಾಗಾಗಿ ಅನುಷ್ಕಾರನ್ನು ರಜನಿ ಜೊತೆ ನೋಡುವ ಸೌಭಾಗ್ಯ ಖಂಡಿತ ಪ್ರೇಕ್ಷಕರದು ಎಂಬ ವಿಶ್ವಾಸ ಹೊಂದಿದ್ದಾರೆ ಸೌಂದರ್ಯ ರಜನಿಕಾಂತ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











