ರವಿಚಂದ್ರನ್ ಜೊತೆ ಕವಿತಾ ಲಂಕೇಶ್ ಕ್ರೇಜಿ ಲೋಕ
ಕನಸುಗಾರ ರವಿಚಂದ್ರನ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಆಕ್ಷನ್ ಕಟ್‌ನಿಂದ ದೂರ ಸರಿದಿದ್ದು ನಟನೆಗಷ್ಟೆ ಸೀಮಿತವಾಗಿರುವುದು ವಿಶೇಷ. ಚಿತ್ರಕ್ಕೆ ಕ್ರೇಜಿ ಲೋಕ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಭರವಸೆಯ ನಿರ್ದೇಶಕಿ ಕವಿತಾ ಲಂಕೇಶ್ ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ಮದುವೆಯಾದ ಡೈಸಿ ಬೋಪಣ್ಣ ಚಿತ್ರದ ನಾಯಕಿ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಉಳಿದಂತೆ ರವಿಚಂದ್ರನ್ ಚಿತ್ರದಲ್ಲಿರುವಂತೆ ಎಲ್ಲಾ ಮಸಾಲೆಗಳು ಇರುತ್ತವೆ. ಜುಲೈ 29ರಂದು ಚಿತ್ರ ಸೆಟ್ಟೇರಿದೆ. ಕಾನ್ಫಿಡೆಂಟ್ ಗ್ರೂಪ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಈ ಹಿಂದೆ ಇದೇ ಸಂಸ್ಥೆ ಪ್ರೀತಿಯಿಂದ ರಮೇಶ್ ಎಂಬ ಚಿತ್ರವನ್ನು ನಿರ್ಮಿಸಿತ್ತು. ಮಣಿಕಾಂತ್ ಕದ್ರಿ ಅವರ ಸಂಗೀತ, ಎ ಸಿ ಮಹೇಂದ್ರನ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಹರ್ಷಿಕಾ ಪೂಣಚ್ಚ ಹಾಗೂ ಸೂರ್ಯ ಉಳಿದ ಪಾತ್ರವರ್ಗದಲ್ಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Crazy star V Ravichandran is now joining director Kavitha Lankesh for his upcoming movie Crazy Love, which is a full commercial flick. He will be directed by Kannada filmmaker in the movie, which features actress Daisy Bopanna opposite him.
ರವಿಚಂದ್ರನ್ ಡೈಸಿ ಬೋಪಣ್ಣ ಕವಿತಾ ಲಂಕೇಶ್ ಕ್ರೇಜಿ ಸ್ಟಾರ್ ravichandran crazy star daisy bopanna kavitha lankesh


Click it and Unblock the Notifications











