ರಿಯಲ್ ಸ್ಟಾರ್ ಉಪೇಂದ್ರ ರು.15 ಕೋಟಿ ಬಜೆಟ್ ಚಿತ್ರ
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಚಿತ್ರಕ್ಕೆ ಕೋಟಿಗಟ್ಟಲೆ ಬಜೆಟ್ ಸುರಿಯಲಾಗುತ್ತಿದೆ. ಮುನಿರತ್ನ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುರೇಶ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು 'ಕಠಾರಿ ವೀರ ಸುರಸುಂದರಾಂಗಿ'.
ಈ ಚಿತ್ರವನ್ನು ತೆಲುಗು, ತಮಿಳು ಭಾಷೆಗಳಿಗೂ ಡಬ್ ಮಾಡಲಾಗುತ್ತದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರವನ್ನು ಸಂಪೂರ್ಣ 3D ತಂತ್ರಜ್ಞಾನದಲ್ಲಿ ತೆರೆಗೆ ತರಲಾಗುತ್ತಿದೆ. ಇಂದ್ರಲೋಕದ ಅದ್ದೂರಿ ಸೆಟ್‍ನ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ.
ಎಚ್ ಸಿ ವೇಣು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರಕ್ಕೆ ಈ ಹಿಂದೆ 'ಯಮೇಂದ್ರ ಉಪೇಂದ್ರ' ಎಂದು ಹೆಸರಿಡಲಾಗಿತ್ತು. ಡಿಸೆಂಬರ್ 6ರಿಂದ ಯಮಲೋಕದ ವಿಶೇಷ ಸೆಟ್ ಹಾಕಿ ರಾಮೋಜಿ ಫಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ರೆಬೆಲ್ ಸ್ಟಾರ್ ಅಂಬರೀಷ್ ಯಮನಾಗಿ ದೊಡ್ಡಣ್ಣ ಚಿತ್ರಗುಪ್ತನಾಗಿ ಪಾತ್ರವನ್ನು ಪೋಷಿಸಿದ್ದಾರೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











