»   » ಸಿಂಧನೂರು ಮೊಬೈಲ್‌ಗಳಲ್ಲಿ ಅಶ್ಲೀಲ ವಿಡಿಯೋ

ಸಿಂಧನೂರು ಮೊಬೈಲ್‌ಗಳಲ್ಲಿ ಅಶ್ಲೀಲ ವಿಡಿಯೋ

Posted By:
Subscribe to Filmibeat Kannada

ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ಎಲ್ಲೆಡೆ ಹರಿಬಿಟ್ಟಿರುವ ಆಘತಕಾರಿ ಸಂಗತಿಯೊಂದು ಸಿಂಧನೂರಿನಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ತುಣುಕು ಸಾರ್ವಜನಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ವಿಡಿಯೋ ದೃಶ್ಯದಲ್ಲಿರುವುದು ವಿದ್ಯಾರ್ಥಿನಿ ಎಂಬುದು ಆಕೆ ಧರಿಸಿರುವ ಸಮವಸ್ತ್ರದಿಂದ ಸ್ಪಷ್ಟವಾಗಿದೆ. ಪಿಯು ಕಾಲೇಜು ಅಥವಾ ಪ್ರೌಢಶಾಲೆ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿದೆ. ಚಿತ್ರೀಕರಣ ದೃಶ್ಯಗಳನ್ನು ಕೆಲವರು ಗೌಪ್ಯವಾಗಿ ಮೊಬೈಲ್‌ನಿಂದ ಮೊಬೈಲ್‌ಗಳಿಗೆ ರವಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ವಿಡಿಯೋ ಚಿತ್ರೀಕರಣವನ್ನು ದೇಶದ ಬೇರೆಡೆ ಚಿತ್ರೀಕರಿಸಿದ್ದಾರೋ ಅಥವಾ ಸಿಂಧನೂರಿನಲ್ಲೇ ಚಿತ್ರೀಕರಿಸಲಾಗಿದೆಯೋ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಈ ಅಶ್ಲೀಲ ವಿಡಿಯೋ ಮಾತ್ರ ಆತಂಕಕ್ಕೆ ಕಾರಣವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada