ನಮಿತಾ ಡಿಯರ್ ಗೆ ನಂ.1 ಪ್ರಜೆ ಅಂದ್ರೆ ಆಗೋಲ್ವಂತೆ!

By Srinath

30-sexiest-southie-actress-namitha-hates-loo-men
ಸೌಂದರ್ಯದ ಗಣಿ ನಮಿತಾ ಡಿಯರ್ ಗೆ ಈ ನಂಬರ್ 1 ಪ್ರಜೆ ಅಂದ್ರೆ ಆಗೋಲ್ವಂತೆ. ನಂ. 1 ಪ್ರಜೆ ಅಂದ್ರೆ ಸಿಕ್ಕಾಪಟ್ಟೆ ಸಿಟ್ಟಂತೆ. ಅವರನ್ನು ಕಂಡ್ರೆ ಕೋಪ ಉಕ್ಕುಕ್ಕಿ ಬರುತ್ತದಂತೆ. ಅವರನ್ನು ಕಂಡ್ರೆ ಕುಂಡಿ ಮೇಲೆ ನಾಲ್ಕು ಬಾರಿಸುವಷ್ಟು ಕೆಟ್ಟ ಕೋಪ ಬರುತ್ತದಂತೆ ನಮ್ಮೀ ನಮ್ಮಿ ಡಿಯರ್ ಗೆ.

ಏನ್ರಿ ಅವರು ಮನುಷ್ಯರಾ. ಅವರಿಗೆ ಸ್ವಲ್ಪಾ ಆದ್ರೂ ನಾಚಿಕೆ ಮಾನ ಮಾರ್ಯಾದೆ ಇರೊಲ್ವಾ? ಒಂಚೂರು ಡೀಸೆನ್ಸ್ ಇಲ್ವಾ ಇವರಿಗೆ? ಏನಂದುಕೊಂಡುಬಿಟ್ಟಿದ್ದಾರೆ ಇವರು? ಬೇರೆ ಯಾರಿಗೂ ಆಗದಿರುವ ಅರ್ಜೆಂಟ್ ಇವರಿಗೊಬ್ಬರಿಗೇನಾ? ಎಂದೆಲ್ಲ ಪ್ರಶ್ನೆಗಳ ಕೆಂಡವನ್ನು ಪಾಪ ನಂ. 1 ಪ್ರಜೆ ಮೇಲೆ ಕಾರಿದ್ದಾರೆ ರೀ.

ಅಷ್ಟೇ ಅಲ್ವಂತೆ ಶೂಟಿಂಗಿಗಾಗಿ ನಡುರಸ್ತೆಯಲ್ಲಿ ಹೋಗುತ್ತಿರುವಾಗ ಈ ನಂ. ಒನ್ ಸತ್ಪ್ರಜೆ ಏನಾದರೂ ಇವರ ಕಣ್ಣಿಗೆ ಬಿದ್ದರೆ ಮುಗಿದೇ ಹೋಯ್ತು. ಹೋಗಿ ಅವನ ತಲೆ ಚೆಂಡಾಡುವಷ್ಟು ಕೋಪ ಬರುತ್ತಂತೆ ಈಯಮ್ಮನಿಗೆ.

ಹೋಗಿ ಹೋಗಿ ಆ ಬಡಪಾಯಿ ಬಗ್ಗೆ ಇಷ್ಟೊಂದು 'ಸಿಟ್ಯಾಕೆ, ಸಿಡುಕ್ಯಾಕೆ ನನ ಜಾಣೆ?' ಹೋಗ್ಲಿ, ಆ 'ಗೌರವಾನ್ವಿತ' ನಂ. 1 ಪ್ರಜೆ ಯಾರು? ಅಂತ ಹೇಳು ನನ್ ಡಿಯರ್ ಅಂತ ಕೇಳುದ್ದುಕ್ಕೆ ನಮ್ಮಿ ಕಳಕ್ ಅಂತ ನಕ್ಕಿ, ಥೂ ಹೋಗೀಪಾ! ನನಗೆ ನಾಚಿಕೆಯಾಗುತ್ತೆ ಎಂದು ಮುಖ ತಿರುಗಿಸಿಕೊಳ್ಳೋದೆ. ಸ್ವಲ್ಪ ಜಬರುದಸ್ತಿನಿಂದ ಏ ವಸಿ ಕುಲುಕೋದ್ ನಿಲ್ಸಿ. ಅವ ಯಾರು ಅಂತ ಹೇಳಮ್ಮಿ ಅಂದಿದ್ದೇ ತಡ.

ಯೋವ್ ಅದೇ ... ರಸ್ತೆ ಬದಿ ಎಲ್ಲ (ಮಾನ ಮರ್ವಾದೆ ವಗೈರೆ) ಬಿಟ್ಟು ಉಚ್ಚಿ ಮಾಡ್ತಾ ನಿಂತುಬಿಡುತ್ತಲ್ಲ ಗಂಡು ಗೋವಿ. ಅದರ ಬಗ್ಗೆಯಾ ನನಗಿಷ್ಟು ಸಿಟ್ಟು. ಪ್ಲೀಸ್. ನೀನ್ ಮಾತ್ರ ಆ ಥರ ನಿಂತ್ಕೋ ಬೇಡ ನನ ರಾಜಾ ಎಂದು ಬಂದು ನನ್ನ ಮೈಮೇಲೆ ಬೀಳೋದೆ ನಮ್ಮಿ. ಸೋ, ನೆಕ್ಟ್ ಟೈಮ್ ಎಲ್ಲಾರಾ ರಸ್ತೆ ಬದಿ ನೀವು ಉಚ್ಚಿ ಮಾಡೋಕೆ ನಿಂತ್ಕೊಂಡ್ರೆ 'ಎದೆಗಾತಿ' ನಮಿತಾ ಎದ್ದು ಬಂದು ಎದೆಗೆ ಒದ್ದಾಳು. ಹುಷಾರು.

More from Filmibeat

English summary
Sexiest Southie Actress Namitha hates No. 1 Citizen that is a man who urinates in public. So beware of Namitha when u urinate in public place next time! 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X