ದರ್ಶನ್ ಸಾರಥಿ ಕಾಪಾಡಿದ ಆಟೋರಾಜ ಶಂಕರ್

ಎಂದೋ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಸೆ.30 ರಂದೇ ಬಿಡುಗಡೆ ಮಾಡಿದ ನಿರ್ಮಾಪಕರ ಸತ್ಯಪ್ರಕಾಶ್ ಅವರ ವ್ಯವಹಾರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ. ಸೆ.30 ಶಂಕರ್ ನಾಗ್ ಅವರ ತಿಥಿ ದಿನವಾಗಿದೆ. ಜೊತೆಗೆ ಸಾರಥಿ ಚಿತ್ರ ಕೂಡಾ ಆಟೋರಿಕ್ಷಾ ಚಾಲಕರ ಕಥೆ ಹೇಳುತ್ತದೆ. ಶಂಕರ್ ಅಭಿಮಾನಿಯಾಗಿರುವ ಸತ್ಯ ಪ್ರಕಾಶ್ ಗೆ ಇಂದಿಗಿಂತ ಪ್ರಾಶಸ್ತ್ಯವಾದ ದಿನ ಬೇಕೆ.
ಸಾರಥಿ ಚಿತ್ರದ ಆಡಿಯೋ ಕೂಡಾ ಆಟೋ ಚಾಲಕರ ನಡುವೆ ಬಿಡುಗಡೆಗೊಂಡಿತ್ತು. ಕತ್ರಿಗುಪ್ಪೆ ಶಂಕರನಾಗ್ ವೃತ್ತದ ಆಟೋಚಾಲಕರ ಸಂಘ, ಆದರ್ಶ ಆಟೋ ಚಾಲಕರ ಸಂಘ ಸೇರಿದಂತೆ ಹಲವಾರು ಆಟೋರಿಕ್ಷಾ ಚಾಲಕರ ಸಂಘಟನೆಗಳು ನರ್ತಕಿ ಟಾಕೀಸ್ ಹತ್ತಿರ ಜಮಾಯಿಸಿದ್ದಾರೆ.
ಬಾಲ್ಕನಿಯಲ್ಲಿ ನಿಂತು ಹರಿದು ಬರುತ್ತಿರುವ ಜನಸಮೂಹವನ್ನು ಕಂಡ ನಿರ್ದೇಶಕ ದಿನಕರ್ ತೂಗುದೀಪ ಹಾಗೆ ಆಕಾಶದ ಕಡೆಗೆ ಕೈ ಎತ್ತಿ ಶಂಕರ್ ನಾಗ್ ಅವರನ್ನು ಸ್ಮರಿಸಿದ್ದಾರೆ.
ನರ್ತಕಿ ಅಲ್ಲದೆ, 15ಕ್ಕೂ ಹೆಚ್ಚು ಮಲ್ಟಿಪೆಕ್ಸ್ ಸ್ಕ್ರೀನ್ ಗಳು, 90ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜನಭರಿತ ಪ್ರದರ್ಶನ ಕಂಡಿದೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಕಿವಿಗೆ ಇನ್ನೂ ಅಭಿಮಾನಿಗಳ ಜೈಕಾರ ಕೇಳಿಸಿಲ್ಲ. ಕೇಳಿಸಿದ್ದರೆ ಕಣ್ಣಾಲಿಗಳು ತುಂಬಿ ಬರುತ್ತಿದ್ದದ್ದಂತೂ ಗ್ಯಾರಂಟಿ.


Click it and Unblock the Notifications











