For Quick Alerts
  ALLOW NOTIFICATIONS  
  For Daily Alerts

  ಶಕೀರಾ ಫ್ಯಾನ್ ಶಿವಣ್ಣ ಸುತ್ತ ಒಂಬತ್ತು ಗರ್ಲ್ ಫ್ರೆಂಡ್ಸ್

  |

  ಸ್ಯಾಂಡಲ್ ವುಡ್ ಗೆ ಒಬ್ಬರೇ ಶಿವಣ್ಣ. ಅವರು 49+1 ರ ಸಮೀಪವಿದ್ದರೂ ಈಗಲೂ 20+ ಲವಲವಿಕೆ ಉಳಿಸಿಕೊಂಡಿರುವ, ಒಳ್ಳೆ ಇಮೇಜ್ ಗಳಿಸಿಕೊಂಡಿರುವ ಅಪರೂಪದ ನಟ. ಪಾತ್ರಗಳ ವೈವಿಧ್ಯತೆಯಲ್ಲಿ ಈಗಲೂ ಬಹಳಷ್ಟು ಚಿತ್ರಗಳನ್ನು ಯಾವಾಗಲೂ ಕೈಯಲ್ಲಿ ಇಟ್ಟುಕೊಂಡಿರುವ ನಟ. ಕಿರಿಕ್ ಎಂದರೆ ಏನೆಂದು ಗೊತ್ತಿರದ ಕನ್ನಡದ ಶ್ರೀಗಂಧ.

  ಒಂದು ಕಡೆ ಓಂ ಪ್ರಕಾಶರ್ ರಾವ್, ಮಾದೇಶ್, ರವಿ ಶ್ರೀ ವತ್ಸ, ರಾಘವ ಲೋಕಿ ಮುಂತಾದ ಹಳಬರಿಗೆ ತಮ್ಮ ಬರಲಿರುವ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಇನ್ನೊಂದು ಕಡೆ 'ಸಮ್ ಥಿಂಗ್ ಸ್ವರೂಪ್' ಎಂಬ ಹೊಸ ನಿರ್ದೇಶಕರಿಗೆ ಮುಂದಿನ ವರ್ಷದ ಡೇಟ್ ಕೊಟ್ಟಿದ್ದಾರೆ. ಅದಕ್ಕೇ ಹೇಳುವುದು ಶಿವಣ್ಣ ಈಸ್ 'ಸಮ್ ಥಿಂಗ್ ಸ್ಪೆಷಲ್' ಮತ್ತು ಗ್ರೇಟ್.

  ಸಮ್ ಥಿಂಗ್ ಸ್ವರೂಪ್ ಎಂಬವರು ಶಿವರಾಜ್ ಕುಮಾರ್ ಗಾಗಿ ಮಾಡುತ್ತಿರುವ ಚಿತ್ರದ ಹೆಸರು 'ಶಿವ್ ಕೇರ್ ಆಫ್ ಬ್ಯೂಟಿಫುಲ್ ಗರ್ಲ್ಸ್'. ಈ ಹೊಸ ನಿರ್ದೇಶಕರು ಶಿವಣ್ಣರನ್ನು ರೊಮ್ಯಾಂಟಿಕ್ ಹೀರೋ ಆಗಿ ತೋರಿಸುವುದಕ್ಕೆ ಹೊರಟಿದ್ದಾರಂತೆ. ಅವರಿಗೆ ಈ ಮೊದಲು 'ಪಾರಿಜಾತ' ಹಾಗೂ 'ಜೀವ' ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇದೆಯಂತೆ.

  ಈ ಚಿತ್ರ " ಶಿವ ಎಂಬ ಎನ್ ಆರ್ ಐ ಒಬ್ಬನ ಕಥೆ. ಈ ಚಿತ್ರದ ಹೀರೋ ಶಕೀರಾ ಫ್ಯಾನ್ ಆಗಿರುತ್ತಾರೆ. ಜೊತೆಗೆ ಸೈಕಲ್ ಬಗ್ಗೆ ವಿಶೇಷ ಕ್ರೇಜ್ ಇಟ್ಟುಕೊಂಡಿರುತ್ತಾರೆ. ಇದರಲ್ಲಿ ನಾಯಕನಿಗೆ ಒಂಬತ್ತು ಗರ್ಲ್ ಫ್ರೆಂಡ್ಸ್ ಗಳು. ಹಾಗಾಗಿ ಈ ಚಿತ್ರಕ್ಕೆ ಶಿವ್ ಕೇರ್ ಆಫ್ ಬ್ಯೂಟಿಫುಲ್ ಗರ್ಲ್ಸ್ ಎಂಬ ಹೆಸರು" ಎಂಬುದು ಭಾವೀ ನಿರ್ದೇಶಕರ ಹೇಳಿಕೆ.

  ನಾಯಕಿ ಆಯ್ಕೆ ಇನ್ನೂ ಆಗಿಲ್ಲದ ಈ ಚಿತ್ರದ ತಾಯಿ ಪಾತ್ರಕ್ಕೆ ಹಿರಿಯ ನಟಿ 'ಮಾಧವಿ' ಯನ್ನು ಕರೆತರುವ ನಿರೀಕ್ಷೆ ಇದೆ. ಮೊದಲ ಚಿತ್ರ 'ಆನಂದ್' ದಲ್ಲಿ ಕಂಡಷ್ಟೇ ಫ್ರೆಶ್ ಆಗಿ ಈ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ ಶಿವಣ್ಣ. ಅಲ್ಲಿಗೆ ಇನ್ನೊಂದು 'ಆನಂದ' ಬಂದು ಶಿವಣ್ಣ ಅಭಿಮಾನಿಗಳಿಗೆ ಆನಂದವಾಗಲಿರುವುದು ಗ್ಯಾರಂಟಿ.

  English summary
  Populer actor Shivrajkumar acts in new movie. Name, Shiv care of Beautiful Girls. The director is new and name, something swaroop. This movie comes in next year.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X