ಅಯ್ಯಪ್ಪ ಸ್ವಾಮಿಗಳಾದ ಹ್ಯಾಟ್ರಿಕ್ ಹೀರೋ ಶಿವಣ್ಣ

By Rajendra

ಸತತ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿಯೂ ಅಯ್ಯಪ್ಪ ಮಾಲೆ ಹಾಕಿದ್ದಾರೆ. ಶಿವಣ್ಣನಿಗೆ ಗುರುಗಳು ಹಿರಿಯ ನಟ ಶಿವರಾಂ. ಇಪ್ಪತ್ತೊಂದು ದಿನಗಳ ಕಾಲ ಶಿವಣ್ಣ ಅಯ್ಯಪ್ಪ ವ್ರತಾಚರಣೆ ಮಾಡುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ನಾಗವಾರ ಮನೆಯಲ್ಲಿ ಪೂಜೆ ಮೂಲಕ ಮಾಲೆ ಸ್ವೀಕರಿಸಲಾಯಿತು. ಶಿವಣ್ಣನ ಜೊತೆ ನಿರ್ದೇಶಕ ರಘುರಾಂ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅವರೂ ಶಬರಿಮಲೆಗೆ ಪಾದ ಬೆಳೆಸುತ್ತಿದ್ದಾರೆ. ಇವರೆಲ್ಲಾ 21 ದಿನಗಳ ವ್ರತಾಚರಣೆ ಬಳಿಕ ಫೆಬ್ರವರಿ 16ರಂದು ಶಬರಿಮಲೆಗೆ ಹೊರಡಲಿದ್ದಾರೆ.

ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ ಪಡೆದುಕೊಂಡು ಫೆಬ್ರವರಿ 19ಕ್ಕೆ ಹಿಂತಿರುಗಲಿದ್ದಾರೆ. ಈ ಹಿಂದೆ ವರನಟ ಡಾ.ರಾಜ್‌ಕುಮಾರ್ ಜೊತೆ ಶಬರಿಮಲೆಗೆ ಶಿವಣ್ಣ ಹೋಗುತ್ತಿದ್ದರು. ಅಣ್ಣಾವ್ರು ಮಾಲೆ ಹಾಕಿದಾಗಿನ ವಸ್ತ್ರಗಳನ್ನೇ ಶಿವಣ್ಣ ಬಳಸುತ್ತಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Shivarajkumar has taken 'Maalai' for Sabarimala and it is well known the actor is going to visit the Lord Ayyappan temple to offer his prayers on 16th of February. In the past Shivarajakumar was going with his father Dr Rajakumar to Shabarimale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X