»   » ನಾಲ್ಕು ವಿಭಿನ್ನ ಗೆಟಪ್ ಗಳಲ್ಲಿ ಶಿವರಾಜ್ ಕುಮಾರ್

ನಾಲ್ಕು ವಿಭಿನ್ನ ಗೆಟಪ್ ಗಳಲ್ಲಿ ಶಿವರಾಜ್ ಕುಮಾರ್

Posted By:
Subscribe to Filmibeat Kannada

ನಿರ್ಮಾಪಕರ 'ಡಾರ್ಲಿಂಗ್' ಎಂದೇ ಕರೆಯಲ್ಪಡುವ ಶಿವರಾಜ್ ಕುಮಾರ್ ತನ್ನ ಮುಂದಿನ ಸಿನಿಮಾದಲ್ಲಿ 19 ರಿಂದ60 ವರ್ಷದೊಳಗಿನ 4 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಜ್ರೇಶ್ವರಿ ಕುಮಾರ್ ನಿರ್ದೇಶನದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಈ ಚಿತ್ರ ಜನವರಿ 2008 ರಲ್ಲಿ ಸೆಟ್ಟೇರಲಿದೆ. ತನ್ನ ವೃತ್ತಿ ಜೀವನದ ಅತ್ಯಂತ ಕ್ರಿಯೇಟಿವ್ ಪಾತ್ರ ಇದು ಎನ್ನುತ್ತಾರೆ ಶಿವರಾಜ್ ಕುಮಾರ್.

ಇದು ರಜನಿಕಾಂತ್ ಅವರ 'ಅರಲಿಂದು ಅರವಧುವರೈ' ಚಿತ್ರದ ಹಾಗೆ ಇರುವುದಿಲ್ಲವಂತೆ. ಮಧ್ಯ ವಯಸ್ಸಿನಿಂದ ಆರಂಭ ವಾಗುವ ಚಿತ್ರದ ಕ್ಲೈಮ್ಯಾಕ್ಸ್ 60 ವರ್ಷದ ಪಾತ್ರದಲ್ಲಿ ಮುಗಿಯುತ್ತದೆ ಎಂದು ಶಿವರಾಜ್ ತಿಳಿಸಿದರು. ತನ್ನ ಬೆಂಗಳೂರಿನ ನಾಗವಾರದ ಹೊಸ ಮನೆಯ ಸೆಂಟ್ರಲ್ ಹಾಲ್ ನಲ್ಲಿ ಶಿವು ತಿಳಿಸಿದರು.ಸೂರ್ಯನ ಕಿರಣಗಳು ಮನೆಯ ಎಲ್ಲ ಭಾಗದಲ್ಲೂ ಇಣುಕುವಂತೆ ಹೊಸ ವಿನ್ಯಾಸದಲ್ಲಿ ನಿರ್ಮಿಸಿರುವ ಶಿವರಾಜ್ ಕುಮಾರ್ ಕನಸಿನ ಮನೆ ಇದಕ್ಕೆಲ್ಲಾ ಮೂಕ ಸಾಕ್ಷಿಯಾಗಿತ್ತು!!

ಸದ್ಯ ಅಮೆರಿಕಾದಬೇರೆ ಬೇರೆ ಪ್ರದೇಶಗಳಲ್ಲಿ ಮಗಳು ನಿವೇದಿತ ಜೊತೆ ಶೂಟಿಂಗ್ ನಲ್ಲಿ ನಿರತ ವಾಗಿದ್ದರೂ, ಮಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಚಿತ್ರೀಕರಣದಲ್ಲಿ ಸಂಪೂರ್ಣ ತೊಡಗಿಸಿ ಕೊಳ್ಳಲ್ಲಿದ್ದಾರೆ.ಅವರ ಅಭಿನಯದ ಪರಮೇಶಿ ಪಾನ್ ವಾಲ ಮತ್ತು ನಂದ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.ಜೀ ಕನ್ನಡದ ರಘುರಾಮ್ ನಿರ್ದೇಶನದ 'ಚೆಲುವೆಯೆ ನಿನ್ನ ನೋಡಲು' ಚಿತ್ರದಲ್ಲಿ ಕೂಡ ಶಿವು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಚಿತ್ರದ ಧ್ವನಿ ಮುದ್ರಣ ಕಾರ್ಯ ಭರದಿಂದ ನಡೆಯುತ್ತಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ
ಮಗಳೊಂದಿಗೆ ಮತ್ತೆ ಶಿವರಾಜ್ ಅಭಿನಯ
ಮಾದೇಸ ನಿರ್ಮಾಪಕ ಮೂರ್ತಿ ಕೇರಳದಲ್ಲಿ ಬಂಧನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada