ನೂರೈವತ್ತು ಚಿತ್ರಮಂದಿರಗಳಲ್ಲಿ ಉಪೇಂದ್ರ ಸೂಪರ್

By Rajendra

ಹತ್ತು ವರ್ಷಗಳ ಬಳಿಕ ಉಪೇಂದ್ರ ಆಕ್ಷನ್, ಕಟ್ ಹೇಳುತ್ತಿರುವ ಕಾರಣ ಅವರ 'ಸೂಪರ್' ಚಿತ್ರದ ಬಗ್ಗೆ ಎಲ್ಲಿಲ್ಲದ ಕ್ರೇಜ್ ಉಂಟಾಗಿದೆ. ಈಗಾಗಲೆ ಬಿಡುಗಡೆ ಕಂಡಿರುವ ಚಿತ್ರದ ಆಡಿಯೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರ ಕುತೂಹಲ, ಕಾತುರಗಳನ್ನು ತಣಿಸಲು ಡಿಸೆಂಬರ್ 3ರಂದು 'ಸೂಪರ್' ತೆರೆಗೆ ಅಪ್ಪಳಿಸುತ್ತಿದೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಕರ್ನಾಟಕ ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ವಿಶೇಷ. ಬೆಂಗಳೂರಿನಲ್ಲಿ ಒಟ್ಟು 50 ಚಿತ್ರಮಂದಿರಗಳಲ್ಲಿ 'ಸೂಪರ್' ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ವಿತರಣೆ ಹಕ್ಕುಗಳು ರು.4.5 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಚಿತ್ರಕ್ಕೆ ಸಡ್ಡು ಹೊಡೆಯುವ ಎಲ್ಲ ಲಕ್ಷಣಗಳು 'ಸೂಪರ್' ಚಿತ್ರಕ್ಕೆ ಇವೆ ಎನ್ನಲಾಗಿದೆ. ನಯನತಾರಾ ಮತ್ತು ಉಪ್ಪಿ ಜೋಡಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ.

ಇದೇ ಚಿತ್ರದ ತೆಲುಗು ಅವತರಣಿಕೆಯನ್ನು ಆಂಧ್ರದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಅಶ್ವಿನಿ ದತ್ ಹಾಗೂ ಸುರೇಶ್ ಪ್ರೊಡಕ್ಷನ್ಸ್ ಆಸಕ್ತಿ ತೋರಿಸಿವೆ. ಈ ನಿಟ್ಟಿನಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಡಿಯಿಟ್ಟಿದ್ದಾರೆ. ಶೀಘ್ರದಲ್ಲೇ 'ಸೂಪರ್' ತೆಲುಗು ಅವತರಣಿಕೆ ವಿದೇಶಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಸೂಪರ್ ತೆಲುಗು ಚಿತ್ರ ಯುಎಸ್‌ಎ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುಕೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಸೂಪರ್ ಕನ್ನಡ ಆವೃತ್ತಿ ವಿದೇಶದಲ್ಲಿ ಬಿಡುಗಡೆಯಾವುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ತೆಲುಗು ಚಿತ್ರದ ಕತೆ ಏನೋ ಎಂತೋ ಗೊತ್ತಿಲ್ಲ. ಆದರೆ ಕನ್ನಡದ 'ಸೂಪರ್' ಚಿತ್ರಕ್ಕೆ ಮೊದಲ ವಾರ ಟಿಕೆಟ್ ಸಿಗುವುದು ಅನುಮಾನ.

More from Filmibeat

English summary
Real Star Upendra directed and acted movie Super releasing in 150 centers across Karnataka. Bangalore area distribution rights sold for whopping sum of Rs. 4.5 cr. In Bangalore Super will be releasing in 50 centers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X