ಜಿಂದಗಿ ನಾ ಮಿಲೇಗಿ ದುಬಾರಾ...ಯಡಿಯೂರಪ್ಪ

By Rajendra

Yeddyurappa
ಸಾಮಾನ್ಯವಾಗಿ ಸಂಕಟ ಬಂದಾಗ ವೆಂಕಟರಮಣ ಎನ್ನುವ ಯಡಿಯೂರಪ್ಪ ಈ ಬಾರಿ ಮೊರೆ ಹೋಗಿದ್ದು ಹಿಂದಿ ಸಿನಿಮಾಗೆ. ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಮಾಜಿ ಸಿಎಂ ಒತ್ತಡದಿಂದ ಪಾರಾಗಲು ಸೋಮವಾರ ಸಂಜೆ (ಆ.29) ಹಿಂದಿ ಸಿನಿಮಾ ನೋಡಿ ಸಂಭ್ರಮಿಸಿದರು. ಕೋರ್ಟ್‌ಗೆ ಹಾಜರಾದ ಬಳಿಕ ಅವರು ಕುಟುಂಬ ಸಮೇತ ಸೀದಾ ಹೋಗಿದ್ದು ಫೋರಂ ಮಾಲ್‌ಗೆ.

ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿರುವ 'ಜಿಂದಗಿ ನಾ ಮಿಲೇಗಿ ದುಬಾರಾ' ಚಿತ್ರವನ್ನು ವೀಕ್ಷಿಸಿದರು. ಅವರು ಫೋರಂ ಮಾಲ್‌ಗೆ ಬರುತ್ತಿದ್ದಂತೆ ಜನ ಮುಗಿಬಿದ್ದು ಅವರನ್ನು ನೋಡಲು ಮುಂದಾದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜಿಂದಗಿಯಲ್ಲಿ ಮತ್ತೆ ಇಂತಹ ಚಾನ್ಸ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ.

"ನೀವು ಒಂದೆರಡು ದಿನ ನಿಶ್ಚಿಂತೆಯಾಗಿರಿ. ರಿಲ್ಯಾಕ್ಸ್ ಆಗಿ ಎಂದು ವೈದ್ಯರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು. ಹಾಗಾಗಿ ಅವರು ಸಿನಿಮಾ ವೀಕ್ಷಣೆಗೆ ಬಂದಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.ಈ ವಾರಂತ್ಯವನ್ನು ಶಿವಮೊಗ್ಗದಲ್ಲಿ ಕಳೆಯಲು ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Former chief minister B S Yeddyurappa could not have chosen a better movie to catch up on, on Monday evening, considering his life and times as a bygone CM.He arrived at Forum Mall with his family members to watch Zindagi Na Milegi Dobara, the Hrithik Roshan-Katrina Kaif starrer, surprising the mall crowd. This came hours after he appeared before a local court in connection with a corruption case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X