»   » ಸುದೀಪ್‌ರ ‘ರಂಗ, ಎಸ್‌ಎಸ್‌ಎಲ್‌ಸಿ’

ಸುದೀಪ್‌ರ ‘ರಂಗ, ಎಸ್‌ಎಸ್‌ಎಲ್‌ಸಿ’

Posted By: Staff
Subscribe to Filmibeat Kannada
Sudeep
'ರಂಗ ಎಸ್‌ಎಸ್‌ಎಲ್‌ಸಿ" !
ಅಪ್ಪಟ ಸ್ವಮೇಕ್‌ ಚಿತ್ರವಿದು ಎನ್ನುತ್ತಿದ್ದಾರೆ ನಿರ್ಮಾಪಕ ನಿರ್ದೇಶಕರು. 'ಸ್ವಾತಿ ಮುತ್ತು" ಚಿತ್ರದಲ್ಲಿನ ಪೆಕರು ಪೆಕರು ಸುದೀಪ್‌- 'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದಲ್ಲಿ ಒರಟು ಒರಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂಥರಾ ಚೇಂಜು. ಜನ ಚೇಂಜ್‌ ಕೇಳ್ತಿದಾರೆ ಸ್ವಾಮಿ !

ಹಾಗೆ ನೋಡಿದರೆ 'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದ ಶೂಟಿಂಗ್‌ ಈ ವೇಳೆಗೆ ಹೆಚ್ಚೂಕಡಿಮೆ ಮುಗಿದಿರಬೇಕಾಗಿತ್ತು . ಸ್ವಾತಿಮುತ್ತು ಚಿತ್ರಕ್ಕಿಂಥ ಮುಂಚೆಯೇ ರಂಗನ ಪ್ರಾಜೆಕ್ಟನ್ನು ಸುದೀಪು ಒಪ್ಪಿಕೊಂಡಿದ್ದರು. ಆದರೆ ನಿರ್ಮಾಪಕ ಎನ್‌.ಕುಮಾರ್‌ಗೆ ಅವಸರದ ಅಡುಗೆ ಇಷ್ಟವಿಲ್ಲ . ಸಂಭಾಷಣೆಕಾರ ಸೂರಿ ಅವರೊಂದಿಗೆ ಕುಳಿತು ಚಿತ್ರದ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಸ್ಕಿೃೕನ್‌ಪ್ಲೇ ಪಕ್ಕಾ ಆಗಿದೆ ಎಂದು ಕುಮಾರ್‌ ವಿಶ್ವಾಸದಿಂದ ಬೀಗುತ್ತಾರೆ.

ಚಿತ್ರಕಥೆಯಷ್ಟೇ ಅಲ್ಲ , ಚಿತ್ರದ ಕುರಿತ ಪ್ರತಿಯಾಂದೂ ಪಕ್ಕಾ ಆಗಿದೆ. ಚಿತ್ರದ ಶೂಟಿಂಗ್‌ನಿಂದ ಹಿಡಿದು ಕುಂಬಳಕಾಯಿ ಒಡೆಯುವ ತನಕ, ಚಿತ್ರ ತೆರೆ ಕಾಣುವ ತನಕ- ಪ್ರತಿಯಾಂದನ್ನೂ ಈಗಾಗಲೇ ನಿರ್ಣಯಿಸಲಾಗಿದೆ. ಏಪ್ರಿಲ್‌ 23ರಂದು 'ರಂಗ ಎಸ್‌ಎಸ್‌ಎಲ್‌ಸಿ" ತೆರೆಗೆ ಬರುತ್ತಾನೆ ಎನ್ನುತ್ತಾರೆ ಕುಮಾರ್‌.

'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರವನ್ನು ಯೋಗರಾಜ ಭಟ್‌ ನಿರ್ದೇಶಿಸುವರು. ಯೋಗರಾಜ್‌ರ ಮೊದಲ ಚಿತ್ರ 'ಮಣಿ" ವಿಮರ್ಶಕರ ಮೆಚ್ಚುಗೆ ಗಳಿಸಿತ್ತು . 'ಮಣಿ" ಚಿತ್ರ ಸುದೀಪ್‌ಗೂ ಇಷ್ಟವಾಗಿದೆ. ಭಟ್‌ ಜೊತೆ ಒಮ್ಮೆ ಕೆಲಸ ಮಾಡಬೇಕು ಎಂದು 'ಮಣಿ" ಚಿತ್ರ ನೋಡಿದಾಗಲೇ ಸುದೀಪ್‌ ಅಂದುಕೊಂಡಿದ್ದರಂತೆ. ಅಂದುಕೊಂಡಿದ್ದು 'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದ ಮೂಲಕ ನಿಜವಾಗುತ್ತಿದೆ.

ಚಿತ್ರದ ಮುಹೂರ್ತದ ಸಂದರ್ಭ (ಜ.23) ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಯೋಗರಾಜ ಭಟ್‌- 'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದಲ್ಲಿ ಹಲವಾರು ವಿಶೇಷಗಳಿವೆ. ಇದೊಂದು ವಿಭಿನ್ನ ಚಿತ್ರ. ಈ ಚಿತ್ರದಲ್ಲಿ ಪಕ್ಕಾ ಆಡುಭಾಷೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಕಥೆ ಹೇಳಿ ಅಂದರೆ, ಸಿನಿಮಾ ತೆರೆ ಕಾಣುವವರೆಗೂ ಕಾಯಿರಿ ಎಂದು ಮೌನವಾದರು.

ಸುದೀಪ್‌ಗೆ ಕೂಡ 'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದ ಬಗ್ಗೆ ಇನ್ನಿಲ್ಲದ ವಿಶ್ವಾಸ. ಇದು ಅಪ್ಪಟ ಸ್ವಮೇಕ್‌. ಚಿತ್ರದ ಪ್ರತಿಯಾಂದು ದೃಶ್ಯವೂ ಸ್ವಮೇಕ್‌ ಎಂದು ಸುದೀಪ್‌ ಘೋಷಿಸಿದರು. ನಾನು ನಿರ್ದೇಶಕರ ನಟ. ನನ್ನ ಪ್ರತಿಭೆಯನ್ನು ನಿರ್ದೇಶಕರು ತಮಗಿಷ್ಟಬಂದಂತೆ ಬಳಸಿಕೊಳ್ಳಬಹುದು ಎಂದು ಸುದೀಪ್‌ ಹೇಳಿದರು.

'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರಕ್ಕೆ ಇಬ್ಬರು ನಾಯಕಿಯರು. ಒಬ್ಬಾಕೆ ಅಭಿ ಖ್ಯಾತಿಯ ರಮ್ಯಾ. ಡೈಸಿ ಬೋಪಣ್ಣ ಮತ್ತೊಬ್ಬಾಕೆ. ್ಫರಮ್ಯಾಗೆ ಸುದೀಪ್‌ ಅಂದ್ರೆ ಇಷ್ಟ . ಈ ಚಿತ್ರದ ಮೂಲಕ ಸುದೀಪ್‌ ಜೊತೆ ಅಭಿನಯಿಸುವ ಅವರ ಕನಸು ನೆರವೇರುತ್ತಿದೆ.

English summary
'Ranga SSLC' : Swamthimuttu Sudeep is back in action
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada