»   » ದೇವರ ಚಿತ್ರ ಮತ್ತು ದಾಮಿನಿ ಕಣ್ಣೀರು!

ದೇವರ ಚಿತ್ರ ಮತ್ತು ದಾಮಿನಿ ಕಣ್ಣೀರು!

Posted By:
Subscribe to Filmibeat Kannada

ಈ ಬೆಳವಣಿಗೆಯಿಂದ ದಾಮಿನಿ ನೊಂದಿದ್ದಾರೆ. ‘ಭಾ...ರತಿ’ ಚಿತ್ರದಿಂದ ನನ್ನ ಮರ್ಯಾದೆ ಮೂರಾಬಟ್ಟೆಯಾಗಿದೆ. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಕೃಷ್ಣೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ದಾಮಿನಿ ಗರ್ಜಿಸಿದ್ದಾಳೆ. ಅವರ ಒಂದು ಕಣ್ಣಿನಲ್ಲಿ ಇನ್ನೊಂದು ಕಣ್ಣಿನಿಂದ ಗಂಗಾನದಿ ಧಾರಾಕಾರವಾಗಿ ಸುರಿಯುತ್ತಿದೆ.

ನನ್ನ ಇಮೇಜ್‌ ಕೆಡಿಸುವ ಪ್ರಯತ್ನ ನಡೆದಿದೆ. ನನ್ನ ಗೆಳೆಯರು ಮತ್ತು ಬಂಧುಗಳ ಎದುರು ನನಗೆ ಅವಮಾನವಾಗಿದೆ. ‘ಭಾ.. ರತಿ’ ಚಿತ್ರದಲ್ಲಿ ನಾನು ಸಭ್ಯವಾಗಿಯೇ ನಟಿಸಿದ್ದೇನೆ. ಸಾಮಾನ್ಯವಾಗಿ ತೊಡುವ ಉಡುಗೆಗಳಾದ ಸೀರೆ ಮತ್ತು ಚೂಟಿಧಾರ್‌ ಧರಿಸಿ, ಟೀವಿ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ ನನ್ನನ್ನು ಅಸಹ್ಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ದಾಮಿನಿಯ ದೂರು.

‘ಬಣ್ಣದ ಗೆಜ್ಜೆ’ ಚಿತ್ರದ ಮೂಲಕ ರಾಜ್ಯಪ್ರಶಸ್ತಿ ಪಡೆದ ನಿರ್ಮಾಪಕ ಕೃಷ್ಣೇಗೌಡರ ಮೇಲೆ ವಿಶ್ವಾಸವಿಟ್ಟು, ಈ ಚಿತ್ರವನ್ನು ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ಪ್ರಶಸ್ತಿ (?) ದಕ್ಕಬಹುದೆಂಬ ದುರಾಸೆಯಿಂದ ಸಂಭಾವನೆ ಇಲ್ಲದೇ ನಟಿಸಿದ್ದೇನೆ. ಆದರೆ ಅದರ ಅಂತಿಮ ಫಲಿತಾಂಶ, ನನ್ನಲ್ಲಿ ನೋವು ತಂದಿದೆ ಎಂದು ದಾಮಿನಿ, ಸುದ್ದಿಗಾರರೊಂದಿಗೆ ಮಾತನಾಡುತ್ತ ಕಣ್ಣೀರಧಾರಿಣಿಯಾದಳು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada