»   » ಗಾಯಕ ರಾಜು ಅನಂತಸ್ವಾಮಿ ದೇಹ ಸ್ಥಿತಿ ಗಂಭೀರ

ಗಾಯಕ ರಾಜು ಅನಂತಸ್ವಾಮಿ ದೇಹ ಸ್ಥಿತಿ ಗಂಭೀರ

Posted By:
Subscribe to Filmibeat Kannada

ಬೆಂಗಳೂರು : ಜನಪ್ರಿಯ ಸುಗಮ ಸಂಗೀತ ಗಾಯಕ ಹಾಗೂ ನಟ ರಾಜು ಅನಂತಸ್ವಾಮಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರುಳಿನ ಊತದ ಸಮಸ್ಯೆಯಿಂದ ಬಳಲುತ್ತಿರುವ ರಾಜು ಅನಂತಸ್ವಾಮಿ ಅವರನ್ನು ಜೆ.ಪಿ.ನಗರದ ರಾಜಶೇಖರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಆದರೆ ಅವರ ದೇಹ ಸ್ಥಿತಿ ಗಂಭೀರವಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ದಿವಂಗತ ಅನಂತಸ್ವಾಮಿ ಅವರ ಪುತ್ರರಾದ ರಾಜು ಅನಂತಸ್ವಾಮಿ, ತಂದೆಯಂತೆಯೇ ಪ್ರತಿಭಾವಂತರು. ಸುಗಮ ಸಂಗೀತ ಕ್ಷೇತ್ರದಲ್ಲಿ ನಾನಾ ಪ್ರಯೋಗಗಳಿಂದ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಅವರು ಪಾತ್ರರಾಗಿದ್ದಾರೆ. ಅವರು ಕೆಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದು, ಶೀಘ್ರದಲ್ಲಿಯೇ ಚೇತರಿಕೆ ಕಾಣಲೆಂದು ಅಭಿಮಾನಿಗಳು ಹಾರೈಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada